ನವದೆಹಲಿ : ವಿಶ್ವದಲ್ಲಿ ತನ್ನ ಆರ್ಭಟ ಮುಂದುವರೆಸುತ್ತಿರುವ ಕೋವಿಡ್-19 ಇದೀಗ ನಮ್ಮ ದೇಶದ ಪ್ರಥಮ ಪ್ರಜೆಯ ಅಧಿಕೃತ ನಿವಾಸ ರಾಷ್ಟ್ರಪತಿ ಭವನ ಪ್ರವೇಶಿಸಿದೆ. ರಾಷ್ಟ್ರಪತಿ ಭವನದ ಶುಚಿತ್ವ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಸಂಬಂಧಿ ಮಹಿಳೆಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿದ್ದು, ಅಧಿಕೃತ ಉದ್ಯೋಗಿಯಲ್ಲದಿದ್ದರೂ ರಾಷ್ಟ್ರಪತಿ ಭವನದ ಸಂಕೀರ್ಣದಲ್ಲೆ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಅಲ್ಲಿ ಕಾರ್ಯನಿರ್ವಹಿಸುವ ಸುಮಾರು 125 ಕುಟುಂಬಗಳ 500 ವ್ಯಕ್ತಿಗಳನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸ್ವಚ್ಛತಾ ಕಾರ್ಯ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯ ಸೊಸೆಯ ತಾಯಿ ಈ ಹಿಂದೆ ಕೋವಿಡ್ 19 ಸೋಂಕಿಗೆ ಮೃತಪಟ್ಟಿದ್ದರು. ಅಂತ್ಯಕ್ರಿಯೆಯಲ್ಲಿ ಅವರ ಕುಟುಂಭಸ್ಥರು ಭಾಗವಸಿದ್ದರು , ಹೀಗಾಗಿ ಅವರ ಮನೆಯನ್ನು ಕಳೆದ ಶನಿವಾರದಿಂದ ಸೀಲ್ ಮಾಡಲಾಗಿದ್ದು, ಇಡೀ ಕುಟುಂಬವನ್ನು ಕ್ವಾರಂಟೈನ್ ನಲ್ಲಿಡಲಾಗಿದೆ.
ಅವರ ಮನೆಯ ನೆರೆಹೊರೆಯ 30 ಮನೆಗಳ ಮಂದಿಯನ್ನು ತೀವ್ರ ಕ್ವಾರಂಟೈನ್ ನಲ್ಲಿರಿಸಿ ಸರ್ಕಾರೀ ಇಲಾಖೆಯಿಂದಲೇ ಆಹಾರ ಪೂರೈಸಲಾಗುತ್ತಿದೆ. ಈ ಬೆಳವಣಿಗೆಯ ನಂತರ ಪುನಃ 95 ಕ್ಕಿಂತ ಹೆಚ್ಚಿನ ಕುಟುಂಬಗಳನ್ನು ಕ್ವಾರಂಟೈನ್ ಗೆ ಒಳಪಡಿಸಿ , ಯಾರೊಬ್ಬರನ್ನೂ ಮನೆಯಿಂದ ಹೊರಬರದಂತೆ ನಿರ್ಬಂಧಿಸಲಾಗಿದೆ.