ಸದಾ ಒಂದಲ್ಲ ಒಂದು ವಿನೂತನ ಪ್ರಯೋಗಳಲ್ಲಿ ಜನಸ್ನೇಹಿಯಾಗಿರುವ ಕೊಂಕಣ್ ರೈಲ್ವೆ ಕೋವಿಡ್ 19 ಹೋರಾಟದಲ್ಲಿ ಈ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ . ಇದೀಗ ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಕು ಸಾಗಣೆ ಒಂದು ದೊಡ್ಡ ಸಮಸ್ಯೆಯಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಜನರ ದೈನಂದಿನ ವಸ್ತುಗಳು ಮತ್ತು ವೈದ್ಯಕೀಯ ಸರಕುಗಳ ಪೂರೈಕೆಗಾಗಿ ಓಖಾ-ತಿರುವನಂತಪುರಂ ಮಧ್ಯೆ ವಿಶೇಷ ಗೂಡ್ಸ್ ರೈಲನ್ನು ಪಶ್ಚಿಮ ರೈಲ್ವೆಯ ಸಹಭಾಗಿತ್ವದೊಂದಿಗೆ ಆರಂಭಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೊಂಕಣ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಕೆ ವರ್ಮ, ದಿನಾಂಕ ಎ.20 ರಂದು ಗುಜರಾತ್ ನ ಓಖಾ ನಿಲುಗಡೆಯಿಂದ ಹೊರಟ ಗೂಡ್ಸ್ ರೈಲು, 21 ರಂದು ಮಹಾರಾಷ್ಟ್ರದ ರತ್ನಗಿರಿ, ಗೋವಾದ ಮಡ್ಗಾವ್, ಕರ್ನಾಟಕದ ಉಡುಪಿ ಮತ್ತು 22 ರಂದು ಮಧ್ಯಾಹ್ನ 12 ಗಂಟೆಗೆ ಕೇರಳದ ತಿರುವನಂತಪುರಂ ನಿಲುಗಡೆಯಲ್ಲಿ ಕೊನೆಗೊಳಲ್ಲಿದೆ. ಹಾಗೆಯೇ ಕರಾವಳಿ ಭಾಗದ ಜನತೆಯ ಜೀವನಾಡಿಯಾಗಿರುವ ಕೊಂಕಣ್ ರೈಲ್ವೆ ವಿಭಾಗ, ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡಲು ದೇಶದೊಂದಿಗೆ ಸದಾ ಇರಲಿದೆ ಎಂದು ತಿಳಿಸಿದ್ದಾರೆ