Saturday, June 6, 2026
Homeಕರಾವಳಿಉಡುಪಿಸುಳ್ಯ: ದಂಪತಿಗೆ ಕೊರೋನಾ ಪಾಸಿಟಿವ್ ; ವೃದ್ಧ ತಾಯಿಯನ್ನು ಮನೆಯಲ್ಲೇ ಬಿಟ್ಟು ದಂಪತಿಗಳು ಪರಾರಿ!

ಸುಳ್ಯ: ದಂಪತಿಗೆ ಕೊರೋನಾ ಪಾಸಿಟಿವ್ ; ವೃದ್ಧ ತಾಯಿಯನ್ನು ಮನೆಯಲ್ಲೇ ಬಿಟ್ಟು ದಂಪತಿಗಳು ಪರಾರಿ!

- Advertisement -
- Advertisement -

ಸುಳ್ಯ : ಬಳೆ ಮಾರಿ ಜೀವನ ಸಾಗಿಸುತ್ತಿದ್ಧ ರಾಜೇಶ್ವರಿ ಹಾಗೂ ವಿನಯಕುಮಾರ್ ದಂಪತಿಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ವೃದ್ಧ ತಾಯಿಯನ್ನು ಮನೆಯಲ್ಲೇ ಕೂಡಿ ಹಾಕಿ ಊರು ತೊರೆದ ಘಟನೆ ಸುಳ್ಯದಲ್ಲಿ ನಡೆದಿದೆ.

ರಾಜೇಶ್ವರಿ ಹಾಗೂ ವಿನಯಕುಮಾರ್ ದಂಪತಿ ವೃದ್ದ ತಾಯಿಯ ಜತೆ ಗಾಂಧಿನಗರ ಸಂತೋಷ್ ಚಿತ್ರಮಂದಿರದ ಎದುರಿನ ಬಿಲ್ಡಿಂಗ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ರಾಜೇಶ್ವರಿ ಮತ್ತು ವಿನಯ ಕುಮಾರ್ ರಿಗೆ ಕಳೆದ ವಾರ ಕೊರೊನಾ ಪರೀಕ್ಷೆ ನಡೆಸಿದಾಗ ಅದರ ವರದಿ ಪಾಸಿಟಿವ್ ಬಂದಿತ್ತು. ಈ ವಿಷಯ ಅರಿತ ಆ ದಂಪತಿಗಳು ಶನಿವಾರ ತಾವಿದ್ದ ಕೊಠಡಿಗೆ ಹೊರಗಿನಿಂದ ಬೀಗ ಹಾಕಿ ತೆರಳಿದ್ದಾರೆ.

ವೃದ್ದೆ ಮನೆಯೊಳಗೆ ಬೊಬ್ಬಿಡುತ್ತಿರುವುದನ್ನು ಕಂಡ ಸ್ಥಳೀಯರು ಪೋಲಿಸರಿಗೆ ವಿಷಯ ತಿಳಿಸಿದ್ದು, ಎಸ್. ಐ. ಹರೀಶ್ ರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯರ ಸಹಾಯದಿಂದ ಬಾಗಿಲು ತೆರೆದು ವೃದ್ದೆಯನ್ನು ರಕ್ಷಿಸಿದ್ದಾರೆ.

- Advertisement -

Latest News

error: Content is protected !!