Thursday, June 4, 2026
Homeಕರಾವಳಿಬೆಳ್ತಂಗಡಿಯಲ್ಲಿ ಪತ್ನಿ ಕೋವಿಡ್ ನಿಂದ ಮೃತಪಟ್ಟ 18 ಗಂಟೆ ಬಳಿಕ ಪತಿಯೂ ಮಹಾಮಾರಿಗೆ ಬಲಿ

ಬೆಳ್ತಂಗಡಿಯಲ್ಲಿ ಪತ್ನಿ ಕೋವಿಡ್ ನಿಂದ ಮೃತಪಟ್ಟ 18 ಗಂಟೆ ಬಳಿಕ ಪತಿಯೂ ಮಹಾಮಾರಿಗೆ ಬಲಿ

- Advertisement -
- Advertisement -

ಬೆಳ್ತಂಗಡಿ : ಕೋವಿಡ್ ಮಹಾಮಾರಿಗೆ ತುತ್ತಾಗಿ ಪತ್ನಿ ಕೊನೆಯುಸಿರೆಳೆದ ಕೇವಲ 18 ಗಂಟೆಗಳ ಅಂತರದಲ್ಲಿ ಪತಿಯೂ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ನೆರಿಯ ಗ್ರಾಮದಲ್ಲಿ‌ ನಡೆದಿದೆ.

ನೆರಿಯ ಗ್ರಾಮದ ಪರಂದಾಡಿ‌ ನಿವಾಸಿ ಸಾರಮ್ಮ (58)ಅವರು  ಮಂಗಳೂರಿನ‌ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಜೂನ್ 22 ನೇ ಮಂಗಳವಾರದಂದು ಮೃತಪಟ್ಟರೆ, ಅವರ ಪತಿ ಇಬ್ರಾಹಿಂ(68) ಅವರು ಬುಧವಾರ ಬೆಳಿಗ್ಗೆ ಮಂಗಳೂರಿನ  ಒಮೇಗಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಇದೀಗ ದಂಪತಿ ಪುತ್ರ ಅಬ್ದುಲ್ ಖಾದರ್ ಅವರಿಗೂ ಕೋವಿಡ್ ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪರಂದಾಡಿ ಇಬ್ರಾಹಿಂ ಮನೆಯಲ್ಲಿ ಸಾರಮ್ಮ ಅವರಿಗೆ ಮೊದಲು ಕೋವಿಡ್ ದೃಢಪಟ್ಟಿತ್ತು, ಅವರಿಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಬಳಿಕ ಪತಿ ಇಬ್ರಾಹಿಂ ಅವರಿಗೂ ಕೋವಿಡ್ ದೃಢಪಟ್ಟಿತ್ತು. ಅವರಿಗೆ  ಹೃದಯ ಸಂಬಂಧಿ ಕಾಯಿಲೆ ಇದ್ದದ್ದರಿಂದ  ಅವರನ್ನು ಮಂಗಳೂರಿನ‌ ಒಮೆಗಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ರೋಗ ಉಲ್ಬಣಗೊಂಡ ಪರಿಣಾಮ  ಸಾರಮ್ಮ ಮಂಗಳವಾರ ಮೃತರಾಗಿದ್ದಾರೆ,  ಪತಿ ಇಬ್ರಾಹಿಂ ಅವರು ಬುಧವಾರ ಸಾವನ್ನಪ್ಪಿದ್ದಾರೆ.

ಮೃತರ ಅಂತ್ಯಸಂಸ್ಕಾರ ನೆರಿಯ ಜುಮ್ಮಾ‌ ಮಸ್ಜಿದ್ ದಫನ ಭೂಮಿಯಲ್ಲಿ‌ ಕೋವಿಡ್ ನಿಯಮಾನುಸಾರ ನಡೆದಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ಸಹಾಯ್ ಬೆಳ್ತಂಗಡಿ ಸರ್ಕಲ್ ತಂಡದ ಕಾರ್ಯಕರ್ತರು ನೆರವೇರಿಸಿದ್ದಾರೆ.‌ ಮೃತ ದಂಪತಿ ಮೂವರು ಮಕ್ಕಳಾದ ಅಬೂಬಕ್ಕರ್, ಅಬ್ದುಲ್ ಖಾದರ್ ಮತ್ತು ರಫೀಕ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!