- Advertisement -
- Advertisement -
ಕಾಸರಗೋಡು: ಮನೆಯೊಳಗೆ ದಂಪತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಾಸರಗೋಡಿನ ಪೆರ್ಲದಲ್ಲಿ ನಡೆದಿದೆ. ಸರ್ಪಮಲೆ ಶೇತ್ತಿಬೈಲ್ ನಿವಾಸಿ ವಸಂತ (26) ಮತ್ತು ಅವರ ಪತ್ನಿ, ಕಜಂಪಾಡಿ ನಿವಾಸಿ ಶರಣ್ಯಾ(22) ಮೃತ ದುರ್ದೈವಿಗಳು.
6 ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಇವರು ಪ್ರತ್ಯೇಕ ಮನೆ ಮಾಡಿಕೊಂಡು ಪತಿ-ಪತ್ನಿ ಮಾತ್ರ ವಾಸವಾಗಿದ್ದರು. ನಿನ್ನೆ ದಿನವಿಡೀ ಇವರ ಮನೆಯ ಬಾಗಿಲು ತೆರೆದಿರಲಿಲ್ಲ. ಇದರಿಂದ ಸಂಶಯಗೊಂಡ ನೆರೆಹೊರೆಯವರು ಸಂಜೆ ವೇಳೆಗೆ ಮನೆ ಬಳಿ ತೆರಳಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬದಿಯಡ್ಕ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
- Advertisement -