Wednesday, May 1, 2024
Homeತಾಜಾ ಸುದ್ದಿಬ್ರಾಹ್ಮಣ ಅಂತ ನನ್ನನ್ನ ಟಾರ್ಗೆಟ್‌ ಮಾಡ್ತಿದ್ದಾರೆ: ರೋಹಿತ್‌ ಚಕ್ರತೀರ್ಥ ಆರೋಪ

ಬ್ರಾಹ್ಮಣ ಅಂತ ನನ್ನನ್ನ ಟಾರ್ಗೆಟ್‌ ಮಾಡ್ತಿದ್ದಾರೆ: ರೋಹಿತ್‌ ಚಕ್ರತೀರ್ಥ ಆರೋಪ

spot_img
- Advertisement -
- Advertisement -

ಬೆಂಗಳೂರು: ನಿನ್ನೆ ಸರ್ಕಾರ ಪಠ್ಯಪುಸ್ತಕ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ನಿರ್ಗಮಿತ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಒಂದು ಜಾತಿಯನ್ನ ಟಾರ್ಗೆಟ್ ಮಾಡ್ತಿದ್ದಾರೆ. ಒಕ್ಕಲಿಗರಿಗೆ, ಲಿಂಗಾಯತರಿಗೆ ಅವಮಾನ ಆಯ್ತು ಎಂದು ಆಯಾಯ ಸಮುದಾಯದವರು ಹೇಳ್ತಿದ್ದಾರೆ. ಆದ್ರೆ ಈ ಸಮಿತಿಯನ್ನೇ ಅನೇಕರು ಟಾರ್ಗೆಟ್ ಮಾಡ್ತಿದ್ದಾರೆ. ಜೊತೆಗೆ ಬ್ರಾಹ್ಮಣ ಸಮುದಾಯವನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದು ಆರೋಪಿಸಿದ್ರು. ಬ್ರಾಹ್ಮಣರಿಗೆ ಅವಹೇಳನ ಪದಗಳನ್ನು ಯೂಸ್ ಮಾಡುತ್ತಿದ್ದಾರೆ. ನಾನು ಯಾವತ್ತೂ ಕೂಡ ಬ್ರಾಹ್ಮಣ ಪರ, ಬ್ರಾಹ್ಮಣ ವಿರುದ್ಧ ಮಾತಾಡಿಲ್ಲ. ನಾನು ಬ್ರಾಹ್ಮಣ ಅಂತ ಎಲ್ಲೂ ಸಿಂಪತಿ ಗಿಟ್ಟಿಸಿಕೊಂಡಿಲ್ಲ ಎಂದು ಅವ್ರು ಹೇಳಿದ್ದಾರೆ.

1 ರಿಂದ 10ನೇ ತರಗತಿಯವರೆಗೆ ಮಾತ್ರ ಪರಿಷ್ಕರಣೆ ಮಾಡಿದ್ದೇವೆ. ಪ್ರಥಮ, ದ್ವೀತಿಯ, ತೃತೀಯ, ಭಾಷೆಗಳ ಪಠ್ಯದಲ್ಲಿ ಮಾತ್ರ ಪರಿಷ್ಕರಣೆ ಮಾಡಿದ್ದೇವೆ. ಅದು ಬಿಟ್ಟರೇ ನಲಿಕಲಿ ಪಠ್ಯ ಪರಿಷ್ಕರಣೆಯನ್ನು ನಮ್ಮ ಸಮಿತಿ ಮಾಡಿಲ್ಲ. ನಾನು ಇದನ್ನು ಪರಿಷ್ಕರಣೆ ಮಾಡಿಲ್ಲ. ಈ ವಿಚಾರಗಳಲ್ಲಿ ಸುಳ್ಳು  ಸುದ್ದಿಗಳು ಹಬ್ಬಿಸುತ್ತಿದ್ದಾರೆ. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಿದೆ.

ಬಸವಣ್ಣ ವಿಚಾರವಾಗಿ ಪರಿಷ್ಕೃತ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪ ಪುಸ್ತಕ ಬಂದಿತ್ತು. ಅದರಲ್ಲಿ ಇರುವ ಅಷ್ಟು ವಿಚಾರಗಳು ಹಾಗೆ ಉಳಿಸಿದ್ದೇವೆ. ಆದ್ರೆ ಈಗ ನಮ್ಮ ವಿರುದ್ಧ ಹೋರಾಟ, ಆಂದೋಲನ ಮಾಡ್ತಾರೆ. ಇವರು ಯಾರು ಕೂಡ ಬರಗೂರು ಏನು ಮಾಡಿದ್ರು ಅಂತ ನೋಡಲ್ಲ, ಕೇಳಲ್ಲ. ಇದರ ಹಿಂದೆ ಕಾಣದ ಕೈಗಳು ಇವೆ. ಬರಗೂರು ಪಠ್ಯ ಪರಿಷ್ಕರಣೆ ಹಾಗೂ ನಮ್ಮ ಸಮಿತಿ ಮಾಡಿದ ಪಠ್ಯ ಪರಿಷ್ಕರಣೆ ಬುಕ್ ಇಟ್ಟುಕೊಂಡು ನೋಡಿ ಎಲ್ಲಾ ವಿವರಗಳು ಗೊತ್ತಾಗಲಿದೆ ಎಂದು ಚಕ್ರತೀರ್ಥ ಹೇಳಿದ್ದಾರೆ.

- Advertisement -
spot_img

Latest News

error: Content is protected !!