- Advertisement -
- Advertisement -
ಮಂಗಳೂರು: ಯಕ್ಷಗಾನ ಪರಂಪರೆಯಲ್ಲಿ ನಾಳೆ ಮಂಗಳೂರು ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗಲಿದೆ.
ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ಭಾನುವಾರ ಸನಾತನ ಯಕ್ಷಾಲಯದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀದೇವಿ ಲಲಿತೋಪಾಖ್ಯಾನ ಪ್ರಸಂಗ ನಡೆಯಲಿದೆ.

ಯಕ್ಷಗುರು ರಾಕೇಶ್ ರೈ ಅಡ್ಕ ನಿರ್ದೇಶನದಲ್ಲಿ ಸನಾತಯ ಯಕ್ಷಾಲಯ ಸಂಸ್ಥೆಯ ಕಲಾವಿದರು ಪ್ರಸಂಗವನ್ನು ಪ್ರಸ್ತುತಪಡಿಸಲಿದ್ದಾರೆ.
ನಾಳೆ ಪ್ರಪ್ರಥಮ ಬಾರಿಗೆ 153 ವೇಷಗಳು ಒಂದೇ ರಂಗಸ್ಥಳದಲ್ಲಿ ಮೇಳೈಸಲಿವೆ.
ನಾಳೆ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಕದ್ರಿ ದೇವಸ್ಥಾನದಲ್ಲಿ ಯಕ್ಷಗಾನ ಪ್ರಸಂಗ ನಡೆಯಲಿದೆ.
ನಾಳೆ ನಡೆಯುವ ಯಕ್ಷಗಾನ ಪ್ರಸಂಗಕ್ಕೆ ಶುಭ ಹಾರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
- Advertisement -