Thursday, June 25, 2026
Homeಕರಾವಳಿಬಂಟ್ವಾಳದಲ್ಲೊಂದು ಅಚ್ಚರಿಯ ಘಟನೆ: ಮಸೀದಿಯೊಂದರಲ್ಲಿ‌‌ 4 ಲಕ್ಷ 33 ಸಾವಿರ ರೂ.ಗೆ ಏಲಂ ಆದ ಹಲಸಿನಕಾಯಿ‌

ಬಂಟ್ವಾಳದಲ್ಲೊಂದು ಅಚ್ಚರಿಯ ಘಟನೆ: ಮಸೀದಿಯೊಂದರಲ್ಲಿ‌‌ 4 ಲಕ್ಷ 33 ಸಾವಿರ ರೂ.ಗೆ ಏಲಂ ಆದ ಹಲಸಿನಕಾಯಿ‌

- Advertisement -
- Advertisement -

ಬಂಟ್ವಾಳದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮಸೀದಿಯೊಂದರಲ್ಲಿ  ಬರೊಬ್ಬರಿ 4 ಲಕ್ಷ 33 ಸಾವಿರ ರೂ.ಗೆ ಒಂದು ಹಲಸಿನ ಕಾಯಿ ಏಲಂ ಆಗಿದ್ದು ಕರಾವಳಿಯಲ್ಲಿ ಈ ದುಬಾರಿ ಹಲಸು ಇದೀಗ ಭಾರೀ ಸದ್ದು‌ ಮಾಡುತ್ತಿದೆ.

ಮೂಲರಪಟ್ನ ಎಂಬಲ್ಲಿ ನವೀಕೃತ ಮಸೀದಿ ಉದ್ಘಾಟಣೆ ಕಾರ್ಯಕ್ರಮಕ್ಕೆ  ಖ್ಯಾತ ಇಸ್ಲಾಮಿಕ್ ವಾಗ್ಮಿ, ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಕೇರಳ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಒಂದು ಹಲಸಿನ ಕಾಯಿ‌ ಏಲಂಗೆ ತರಲಾಗಿತ್ತು.ಹಲಸಿನ‌ ಕಾಯಿ ಸಿರಾಜುದ್ದೀನ್ ಖಾಸಿಮಿ ಏಲಂ ಕರೆದಾಗ ಲತೀಫ್ ಮತ್ತು ಅಝೀಝ್  ಎಂಬವರ ನಡುವೆ ಭಾರೀ ಪೈಪೋಟಿ ನಡೆದಿದೆ.

ಕೊನೆಗೆ 4,33,333 ರೂ.ಗೆ ಹಲಸಿನ ಕಾಯಿ ಲತೀಫ್ ಅವರ ಪಾಲಾಗಿದೆ. ಏಲಂ ವೇಳೆ ಹಲವರು ಭಾಗವಹಿಸಿದ್ದರು. ಆದರೆ ಭಾರೀ ಪೈಪೋಟಿಯೇ ನಡೆದಿತ್ತು ಎನ್ನಲಾಗಿದೆ.

- Advertisement -

Latest News

error: Content is protected !!