Saturday, May 18, 2024
Homeತಾಜಾ ಸುದ್ದಿಜನರಿಲ್ಲದೆ ಬಿಕೋ ಎನ್ನುತ್ತಿದೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್

ಜನರಿಲ್ಲದೆ ಬಿಕೋ ಎನ್ನುತ್ತಿದೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್

spot_img
- Advertisement -
- Advertisement -

ಕೊರೊನಾ ವೈರಸ್ ನಿಂದಾಗಿ ವಾಣಿಜ್ಯ ನಗರಿ ಮುಂಬೈ ತತ್ತರಿಸಿಹೋಗಿದೆ. ಅದರಲ್ಲೂ ಏಷ್ಯಾದ ಅತಿದೊಡ್ಡ ಕೊಳಗೇರಿ ಎಂಬ ಕುಖ್ಯಾತಿ ಪಡೆದಿರುವ ಧಾರಾವಿಯಲ್ಲಿ ಈ ಸೋಂಕು ವ್ಯಾಪಿಸುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಅಂದರೆ 30,706 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಮುಂಬೈ ಹಾಗೂ ಪುಣೆ ಮುಂಚೂಣಿಯಲ್ಲಿವೆ.

ಮುಂಬೈನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿರುವ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ಹೀಗಾಗಿ ಆ ಪ್ರದೇಶಗಳಲ್ಲಿ ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಜೊತೆಗೆ ಕೇಂದ್ರ ಸರ್ಕಾರ ಈಗಾಗಲೇ ರೈಲು ಸಂಚಾರ ರದ್ದುಪಡಿಸಿರುವುದರಿಂದ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ಬಿಕೋ ಎನ್ನುತ್ತಿದೆ. ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಶ್ರಮಿಕ್ ರೈಲು ಹಾಗೂ ವಿಶೇಷ ರೈಲು ಸಂಚರಿಸುವ ಸಂದರ್ಭದಲ್ಲಿ ಮಾತ್ರ ಈ ರೈಲ್ವೆ ಸ್ಟೇಷನ್ ಒಂದಷ್ಟು ಚಟುವಟಿಕೆಯಿಂದ ಕೂಡಿರುತ್ತಿದೆ.

- Advertisement -
spot_img

Latest News

error: Content is protected !!