Wednesday, May 15, 2024
Homeಇತರವಿಶ್ವದ ಸೂಪರ್ ಪವರ್ ರಾಷ್ಟ್ರವಾಗಬೇಕೆಂದು ಕೊರೊನಾ ಕಂಡು ಹಿಡಿದ ಚೀನಾ: ವರದಿ

ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಬೇಕೆಂದು ಕೊರೊನಾ ಕಂಡು ಹಿಡಿದ ಚೀನಾ: ವರದಿ

spot_img
- Advertisement -
- Advertisement -

ಮುಂಬೈ: ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಲ್ಲಿ. ಆದರೆ ಇದೀಗ ಇಡಿ ಜಗತ್ತಿಗೆ ತನ್ನ ಕಬಂಧಬಾಹುಗಳನ್ನು ಚಾಚಿದೆ. ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಈಗಾಗಲೇ ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ನಿಯಮವನ್ನು ಜಾರಿಗೆ ತಂದಿದೆ. ಆದರೆ ಇದರಿಂದ ಜಗತ್ತಿನ ಆರ್ಥಿಕತೆ ನೆಲ ಕಚ್ಚಿದೆ.

ಅಚ್ಚರಿಯ ಸಂಗತಿಯೆಂದರೆ ಈ ಸೋಂಕಿನಿಂದ ಚೀನಾ ಈಗಾಗಲೇ ಚೇತರಿಸಿಕೊಂಡಿದ್ದು, ಜಗತ್ತಿಗೆ ಕೊರೋನಾ ಹಂಚಿದ ವುಹಾನ್ ನಗರ ಸೇರಿದಂತೆ ದೇಶದಲ್ಲಿ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಿದೆ. ಇದರ ಜೊತೆಗೆ ಕೊರೊನಾ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ಅಮೆರಿಕಾ, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಚೀನಾ ಹೂಡಿಕೆ ಮಾಡಿದೆ.

ಕೊರೊನಾ ವೈರಸ್ ವುಹಾನ್ ನಗರದ ಪ್ರಾಣಿಗಳ ಮಾರುಕಟ್ಟೆಯಿಂದ ಆರಂಭವಾಗಿದೆ ಎಂದು ಚೀನಾ ಹೇಳುತ್ತಿದ್ದರೂ ಇದನ್ನು ನಂಬಲು ಬಹುತೇಕ ರಾಷ್ಟ್ರಗಳು ಸಿದ್ಧವಿಲ್ಲ. ಅದರಲ್ಲೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಈ ವೈರಸ್ ಸೃಷ್ಟಿಕರ್ತ ಎಂದು ನೇರವಾಗಿ ಆರೋಪಿಸಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಕೊರೊನಾ ವೈರಸ್ ಚೀನಾದಲ್ಲಿ ಕಾಣಿಸಿಕೊಂಡಾಗ ದೇಶದಲ್ಲಿ ಇದರ ನಿಯಂತ್ರಣಕ್ಕೆ ಎಲ್ಲ ಕ್ರಮ ಕೈಗೊಂಡ ಚೀನಾ, ಸೋಂಕು ಹರಡುವಿಕೆ ಕುರಿತಂತೆ ವಿಶ್ವದ ಇತರ ರಾಷ್ಟ್ರಗಳಿಗೆ ಯಾವುದೇ ಎಚ್ಚರಿಕೆ ನೀಡಲಿಲ್ಲ. ಅಲ್ಲದೆ ಚೀನಾದಿಂದ ಹಾರಾಟ ನಡೆಸುವ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ನಿಲ್ಲಿಸಲಿಲ್ಲ. ಇದರ ಪರಿಣಾಮವಾಗಿ ವಿಶ್ವದ ಎಲ್ಲೆಡೆ ಕೊರೊನಾ ವೈರಸ್ ವ್ಯಾಪಿಸಿದ್ದು, ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲು ಚೀನಾ ಬೇಕೆಂದೇ ಈ ವೈರಸ್ ಸೃಷ್ಟಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಚೀನಾದ ಈ ಕುಟಿಲ ನೀತಿಯಿಂದಾಗಿ ಈಗ ವಿಶ್ವದ ಎಲ್ಲಾ ರಾಷ್ಟ್ರಗಳು ತೊಂದರೆ ಅನುಭವಿಸುವಂತಾಗಿದೆ.

- Advertisement -
spot_img

Latest News

error: Content is protected !!