Thursday, May 2, 2024
Homeಕರಾವಳಿಏರ್ ಲಿಫ್ಟ್: ಗಲ್ಫ್ ರಾಷ್ಟ್ರದಿಂದ ಮಂಗಳೂರು ತಲುಪಿದ 176 ಭಾರತೀಯರು

ಏರ್ ಲಿಫ್ಟ್: ಗಲ್ಫ್ ರಾಷ್ಟ್ರದಿಂದ ಮಂಗಳೂರು ತಲುಪಿದ 176 ಭಾರತೀಯರು

spot_img
- Advertisement -
- Advertisement -

ಮಂಗಳೂರು: ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ವಿದೇಶದಿಂದ ಏರ್ ಲಿಫ್ಟ್ ಮಾಡಿರುವ ಭಾರತೀಯರ ತಂಡ ಇಂದು ಯುಎಇಯಿಂದ ಮಂಗಳೂರು ತಲುಪಿತು. ತಾಯ್ನಾಡಿನ ನೆಲ ತಲುಪಿದವರ ಪ್ರಯಾಣಿಕರಲ್ಲಿ ಸಂತಸ ತುಂಬಿತ್ತು.


ಯುಎಇ ಕಾಲಮಾನ 5.10ಕ್ಕೆ ಹೊರಟ ಏರ್ ಇಂಡಿಯಾ IX384 ವಿಮಾನದ ಮೂಲಕ ಆಗಮಿಸಿದ ವಿಮಾನ ಭಾರತೀಯ ಕಾಲಮಾನ ರಾತ್ರಿ 10.10ರ ವೇಳೆಗೆ 176 ಭಾರತೀಯರನ್ನು ತಾಯ್ನೆಲಕ್ಕೆ ತಲುಪಿಸಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಭಾಗದ ಪ್ರಯಾಣಿಕರಿರುವ ಈ ವಿಮಾನದಲ್ಲಿ 95 ಮಂದಿ ಪುರುಷರು, 81 ಮಂದಿ ಮಹಿಳೆಯರು ಆಗಮಿಸಿದ್ದಾರೆ. ಇದರಲ್ಲಿ 38 ಮಂದಿ ಗರ್ಭಿಣಿಯರು, 12 ಮಂದಿ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವುಳ್ಳವರು ಇದ್ದರು.


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ‌ ಬಂದಿಳಿದ ಪ್ರಯಾಣಿಕರಿಗೆ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಮುದ್ರೆ ಒತ್ತಲಾಯಿತು. ಬಳಿಕ ಪ್ರತ್ಯೇಕ ಐವರು ಅಧಿಕಾರಿಗಳು 10 ಬಸ್​ಗಳ ಮೂಲಕ ಕ್ವಾರಂಟೈನ್ ಸ್ಥಳಗಳಿಗೆ ಕರೆ ತಂದಿದ್ದಾರೆ.


ವಿದೇಶದಿಂದ ಆಗಮಿಸಿರುವ ಈ ಪ್ರಯಾಣಿಕರನ್ನು 14 ದಿನಗಳ ಕಾಲ ಸರ್ಕಾರಿ ನಿಯಂತ್ರಣದಲ್ಲಿರುವ ಹೊಟೇಲ್​​ಗಳಲ್ಲಿ ಅಥವಾ ಹಾಸ್ಟೆಲ್​ಗಳಲ್ಲಿ ಕಡ್ಡಾಯ ಕ್ವಾರಂಟೈನ್​ಗೆ ಒಳಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ವಾರಂಟೈನ್ ವ್ಯವಸ್ಥೆಗಾಗಿ 17 ಹೊಟೇಲ್​ಗಳು ಹಾಗೂ 12 ಹಾಸ್ಟೆಲ್​​ಗಳನ್ನು ಈಗಾಗಲೇ ವ್ಯವಸ್ಥೆ ಮಾಡಿದೆ.

- Advertisement -
spot_img

Latest News

error: Content is protected !!