Friday, May 17, 2024
Homeಕರಾವಳಿಕೋವಿಡ್ 19: ಮರುಬಳಕೆಮಾಡಬಹುದಾದ ಮುಖ ಕವಚವನ್ನು ಅಭಿವೃದ್ಧಿ ಪಡಿಸಿದ ಎನ್ಐಟಿಕೆ ಸುರತ್ಕಲ್

ಕೋವಿಡ್ 19: ಮರುಬಳಕೆಮಾಡಬಹುದಾದ ಮುಖ ಕವಚವನ್ನು ಅಭಿವೃದ್ಧಿ ಪಡಿಸಿದ ಎನ್ಐಟಿಕೆ ಸುರತ್ಕಲ್

spot_img
- Advertisement -
- Advertisement -

ಸುರತ್ಕಲ್: ಮಾಸ್ಕ್, ಪಿಪಿಇ ಕಿಟ್ಗಳು ಮತ್ತು ಪಾರದರ್ಶಕ ಮುಖ ಕವಚಗಳ ಲಭ್ಯತೆ ಇಲ್ಲದೆ ಇರುವುದು ಮತ್ತು ಲಭ್ಯವಿರುವ ಸಲಕರಣೆಗಳು ಮಾರುಕಟ್ಟೆಯಲ್ಲಿ 10ರಿಂದ 15 ಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿರುವುದರಿಂದ ಇವುಗಳು ಜನಸಾಮಾನ್ಯರ ಕೈಗೆಟಕುತ್ತಿಲ್ಲ. ಕಾರ್ಖಾನೆಗಳು ಸಂಪೂರ್ಣವಾಗಿ ಲಾಕ್ಡೌನ್ ಆಗಿರುವುದರಿಂದ ಬೇಡಿಕೆಗೆ ತಕ್ಕಂತೆ ಈ ಆರೋಗ್ಯ ರಕ್ಷಣಾತ್ಮಕ ಸಲಕರಣೆಗಳು ಉತ್ದಾದನೆಯಾಗದೆ ಸೋಂಕಿತರೊಂದಿಗೆ ನೇರವಾಗಿ ವ್ಯವಹರಿಸುವ ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಅಪಾಯದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದು ಕೋವಿಡ್-19 ವೇಗವಾಗಿ ಹರಡಲು ಮತ್ತು ನಿಯಂತ್ರಣ ಕಷ್ಟಕರವಾಗಿರುವುದರ ಪ್ರಮುಖ ಕಾರಣಗಳಲ್ಲೊಂದಾಗಿದೆ.


ಈ ಸಮಸ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಪರಿಹರಿಸುವ ದೃಷ್ಟಿಯಿಂದ ಸ್ಥಳೀಯವಾಗಿ ಲಭ್ಯವಿರುವ ಕಡಿಮೆ ವೆಚ್ಚದ ವಸ್ತುಗಳನ್ನು ಬಳಸಿಕೊಂಡು ಮರುಬಳಕೆ ಮಾಡಬಹುದಾದ ಪಾರದರ್ಶಕ ಮುಖ ಕವಚವನ್ನು ಸುರತ್ಕಲ್ ನ ಎನ್ಐಟಿಕೆಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ. ಅರುಣ್ ಇಸ್ಲೂರ್ ರವರು ಅಭಿವೃದ್ಧಿ ಪಡಿಸಿದ್ದಾರೆ. ಈ ಮುಖಕವಚದ ಬೆಲೆ ಕೇವಲ 12 ರೂಪಾಯಿಗಳಾಗಿದ್ದು, ಡಾ. ಇಸ್ಲೂರ್ರವರ ನೇತೃತ್ವದ ಎನ್ಐಟಿಕೆ ಸುರತ್ಕಲ್ನ ಸ್ವಯಂ ಸೇವಕರ ತಂಡ ಈ ಮುಖಕವಚ ತಯಾರಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ.

ನಿರ್ದೇಶಕ ಪ್ರೊ. ಉಮಾಮಹೇಶ್ವರ ರಾವ್

ಮೊದಲ ಹಂತದಲ್ಲಿ 300 ಮುಖಕವಚಗಳನ್ನು ಎನ್ಐಟಿಕೆ ಸುರತ್ಕಲ್ ನ ನಿರ್ದೇಶಕ ಪ್ರೊ. ಉಮಾಮಹೇಶ್ವರ ರಾವ್ ದಿನಾಂಕ 09 ಮೇ 2020 ರಂದು ಬಿಡುಗಡೆಗೊಳಿಸಿದರು. ಈ ಮುಖ ಕವಚಗಳನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀಮತಿ ಸಿಂಧೂ ಬಿ ರೂಪೇಶ್ ರಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಪ್ರೊ. ಉಮಾಮಹೇಶ್ವರ ರಾವ್. ಎನ್ಐಟಿಕೆ ಯು ಉಚಿತ ಸ್ಯಾನಿಟೈಸರ್, 3ಡಿ ಪ್ರಿಂಟೆಡ್ ಮಾಸ್ಕ್ಗಳ ವಿತರಣೆಯಂತಹ ಕ್ರಮಗಳ ಮೂಲಕ ಕೋವಿಡ್-19ರ ವಿರುದ್ಧ ಹೋರಾಟದಲ್ಲಿ ಜಿಲ್ಲಾಡಳಿತಕ್ಕೆ ಸಕ್ರಿಯವಾಗಿ ಸಹಕಾರ ನೀಡುತ್ತಿದೆ ಎಂದರು.
ಮುಖ ಕವಚದ ಕುರಿತಾಗಿ ತಿಳಿಸಿದ ಡಾ. ಇಸ್ಲೂರ್, ವಮುಖ ಕವಚದ ತಯಾರಿಕೆಗಾಗಿ ಪಾರದರ್ಶಕವಾದ ಪಾಲಿಸ್ಟರ್ ಹಾಳೆ, ಯೋಗ ಮ್ಯಾಟ್, ಸಂಶ್ಲೇಷಿತ ಅಂಟು ಮತ್ತು ವೆಲ್ಕ್ರೋವ್ ಟೇಪ್ಗಳನ್ನು ಬಳಸಲಾಗಿದ್ದು, ಈ ಮುಖ ಕವಚವನ್ನು 90 ರಿಂದ 100 ದಿನಗಳ ವರೆಗೆ ಬಳಸಬಹುದಾಗಿದೆ. ಸೋಪ್ ನೀರು ಅಥವಾ 4 ರಿದ 5 ಹನಿ ಸ್ಯಾನಿಟೈಸರ್ಗಳನ್ನು ಬಳಸಿ ಈ ಮುಖ ಕವಚವನ್ನು ಶುಚಿಗೊಳಿಸಿ ಮರುಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಡಾ. ಅರುಣ್ ಇಸ್ಲೂರ್


ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಲ್ಲಾ ಉಪ ಔಷಧ ನಿಯಂತ್ರಕರಾದ ಶ್ರೀ ರಮಾಕಾಂತ್, ಹೆಚ್ಚುವರಿ ಔಷಧ ನಿಯಂತ್ರಕರಾದ ಶ್ರೀ ಶಂಕರ ನಾಯ್ಕ್, ಎನ್ಐಟಿಕೆ ಸುರತ್ಕಲ್ನ ಕುಲಸಚಿವ ಶ್ರೀ ರವೀಂದ್ರನಾಥ್, ಡೀನ್ ಪ್ರೊ. ಎಂ ಎಸ್ ಭಟ್, ಜಂಟಿ ಕುಲಸಚಿವರಾದ ಶ್ರೀ ವೈ ರಾಮಮೋಹನ್, ಡಾ. ಲಕ್ಷ್ಮಿ, ಸಂಶೋಧನಾ ವಿದ್ಯಾರ್ಥಿ ಹಾಗೂ ಸ್ವಯಂ ಸೇವಕರುಗಳಾದ ಶ್ರೀ ಪ್ರವೀಣ್ ಮತ್ತು ಶ್ರೀ ಸೈಯದ್ ಇಬ್ರಾಹಿಂ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!