ಬಂಟ್ವಾಳ: ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಮತ್ತು ಅಗತ್ಯ ವಸ್ತುಗಳ ಅಲ್ಲದೆ ಇತರೆ ಅಂಗಡಿಗಳನ್ನು ತೆರೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಬಂಟ್ವಾಳ ತಾಲೂಕು ಆಡಳಿತ ನಿರ್ಧರಿಸಿದೆ. ಲಾಕ್ ಡೌನ್ ಅದೇಶ ಉಲ್ಲಂಘಿಸಿ ಅನಗತ್ಯವಾಗಿ ಬಿಸಿರೋಡಿನಲ್ಲಿ ಸುತ್ತಾಡುತ್ತಿದ್ದ ಬೈಕ್ ಒಂದನ್ನು ವಶಕ್ಕೆ ಪಡೆದುಕೊಂಡ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ.
ಜೊತೆಗೆ ಲಾಕ್ ಡೌನ್ ಅವಧಿಯಲ್ಲಿ ಅಗತ್ಯವಸ್ತುಗಳ ಅಂಗಡಿ ಅಲ್ಲದೆ ಇತರೆ ಸಾಮಾಗ್ರಿಗಳನ್ನು ಮಾರಟ ಮಾಡಲು ತೆರೆದಿಟ್ಟಿದ್ದ ಅಂಗಡಿಯ ಪರವಾನಿಗೆಯನ್ನು ರದ್ದುಪಡಿಸಲು ಪುರಸಭಾ ಮುಖ್ಯಾಧಿಕಾರಿ ಅವರಿಗೆ ತಹಶೀಲ್ದಾರ್ ರಶ್ಮಿ ಸೂಚನೆ ನೀಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ವಿನಾ ಕಾರಣ ಸುತ್ತಾಟ ನಡೆಸುವುದು ಹೆಚ್ಚಾಗುವುದು ತಹಶೀಲ್ದಾರ್ ಅವರ ಗಮನಕ್ಕೆ ಬಂದಿದ್ದು ಅವರೇ ನೇರವಾಗಿ ಕಾರ್ಯಚರಣೆಗೆ ಇಳಿದಿದ್ದರು.
ಜಿಲ್ಲಾಡಳಿತ ದಿನಬಳಕೆಯ ವಸ್ತುಗಳಾದ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ನೀಡಿದ್ದಾರೆ. ಅದರೆ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಕೆಲ ಅಂಗಡಿ ಮಾಲಕರು ಅಗತ್ಯ ವಸ್ತುಗಳ ಅಲ್ಲದ ಅಂಗಡಿಗಳನ್ನು ತೆರವುಗೊಳಿಸುವುದು ಅಂಗಡಿಗಳಲ್ಲಿ ಜನ ಸೇರುವುದು ಇವರ ಗಮನಕ್ಕೆ ಬಂದಿತ್ತು. ಅ ಹಿನ್ನೆಲೆಯಲ್ಲಿ ಕಾರ್ಯಚರಣೆ ಮಾಡಿದ ಸಂದರ್ಭದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಎರಡು ಅಂಗಡಿಗಳು ತೆರೆದಿತ್ತು. ಹಾಗಾಗಿ ಅ ಎರಡು ಅಂಗಡಿಗಳ ಲೈಸೆನ್ಸ್ ರದ್ದು ಮಾಡಿ ಎಂದು ಪುರಸಭಾ ಮುಖ್ಯಾಧಿಕಾರಿ ಅವರಿಗೆ ಸೂಚಿಸಿದ್ದಾರೆ.