- Advertisement -
- Advertisement -
ಮಂಗಳೂರು: ಕರಾವಳಿಯಲ್ಲಿ ಹುಟ್ಟಿದ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಾದ ಕಾರ್ಪೋರೇಶನ್ ಹಾಗೂ ಸಿಂಡಿಕೇಟ್ ಬ್ಯಾಂಕ್ ನಿನ್ನೆಯೇ (ಏಪ್ರಿಲ್ 1) ಅಸ್ಥಿತ್ವ ಕಳೆದುಕೊಂಡಿದ್ದು, ಗ್ರಾಹಕರ ಪಾಲಿಗೆ ಅದು ಇನ್ನು ನೆನಪು ಮಾತ್ರ. ಕೇಂದ್ರ ಸರ್ಕಾರದ ತೀರ್ಮಾನದಂತೆ ಕಾರ್ಪೋರೇಶನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಹಾಗೂ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ನೊಂದಿಗೆ ಬುಧವಾರದಿಂದ ವಿಲೀನಗೊಂಡಿದೆ. ಕೊರೋನಾ ಆತಂಕದ ಮಧ್ಯೆಯೂ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ಮುದ್ರೆ ನೀಡಿದೆ.
ವಿಲೀನಗೊಳ್ಳುವ ಬ್ಯಾಂಕ್ ನ ಹೆಸರು ವಿಲೀನಗೊಳ್ಳಲಿರುವ ಬ್ಯಾಂಕ್ ಹೆಸರಾಗಿ ಬದಲಾಗಲಿದೆ. ಸದ್ಯ ಕೊರೋನಾ ಆತಂಕದ ಹಿನ್ನೆಲೆ ಕಾರ್ಮಿಕರ ಕೊರತೆ ಕಾರಣದಿಂದಾಗಿ ವಿಲೀನಗೊಂಡ ಬ್ಯಾಂಕ್ ಗಳ ನಾಮಫಲಕ ಬದಲಾವಣೆಗೆ ಸ್ವಲ್ಪ ದಿನ ಬೇಕಾಗಬಹುದು.
- Advertisement -