- Advertisement -
- Advertisement -
ಧರ್ಮಸ್ಥಳ: ಕೊರೊನ ಲಾಕ್ ಡೌನ್ ಹಿನ್ನಲೆಯಿಂದಾಗಿ ಈ ತಿಂಗಳ ಪಡಿತರ ಚೀಟಿದಾರರಿಗೆ ಪಡಿತರವನ್ನು ಮಾದರಿ ರೀತಿಯಲ್ಲಿ ಶ್ರೀ ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ವಿತರಿಸಲಾಯಿತು. ಈ ಸಾಮಾಜಿಕ ಕಳಕಳಿಯ ಕಾರ್ಯದ ಉಸ್ತುವಾರಿಯನ್ನು ಬ್ಯಾಂಕಿನ ಅಧ್ಯಕ್ಷರಾದ ಹರಿದಾಸ್ ಗಾಂಭೀರ ಹಾಗೂ ಮ್ಯಾನೇಜರ್ ರವೀಂದ್ರ, ಎಲ್ಲಾ ಆಡಳಿತ ಮಂಡಳಿಯ ನಿರ್ದೇಶಕರಗಳು ಮತ್ತು ಸಿಬ್ಬಂದಿ ವರ್ಗ ವಹಿಸಿಕೊಂಡಿದ್ದು, ದಿನವೊಂದಕ್ಕೆ 200 ಜನರಿಗೆ ಪಡಿತರ ವಿತರಿಸಲಾಗುತ್ತಿದೆ.
ಪಡಿತರ ಖರೀದಿಸಲು ಬರುವ ನಾಗರಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಸ್ಯಾನಿಟೈಸರ್ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.
- Advertisement -