Friday, June 5, 2026
Homeಪ್ರಮುಖ-ಸುದ್ದಿಹಬ್ಬದ ಸಂಭ್ರಮದ ಮಧ್ಯೆ ರಾಜ್ಯದಲ್ಲಿಂದು 7,330 ಮಂದಿಗೆ ಕೊರೊನಾ ಸೋಂಕು, 93 ಮಂದಿ ಪಾಲಿಗೆ ಯಮನಾದ...

ಹಬ್ಬದ ಸಂಭ್ರಮದ ಮಧ್ಯೆ ರಾಜ್ಯದಲ್ಲಿಂದು 7,330 ಮಂದಿಗೆ ಕೊರೊನಾ ಸೋಂಕು, 93 ಮಂದಿ ಪಾಲಿಗೆ ಯಮನಾದ ಕೋವಿಡ್

- Advertisement -
- Advertisement -

ಬೆಂಗಳೂರು : ಗೌರಿ ಗಣೇಶ ಹಬ್ಬದ ದಿನ ಕೂಡ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ.ರಾಜ್ಯದಲ್ಲಿ ಇಂದು 7330 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,71,876 ಕ್ಕೆ ಏರಿಕೆಯಾಗಿದೆ. ಇನ್ನು  ಇಂದು 7,626 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 82,677 ಸಕ್ರಿಯ ಪ್ರಕರಣಗಳಿದ್ದು, ಇದುವೆರಗೂ 1,84,568 ಮಂದಿ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 93 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು. ಈ ಮೂಲಕ ಸಾವಿನ ಸಂಖ್ಯೆ 4615 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 2,929 ಜನರಿಗೆ ಸೋಂಕು ಧೃಡವಾಗಿದ್ದು, 28 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ನಗರದಲ್ಲಿ ಕೊರೊನಾ ಸಾವಿನ ಸಂಖ್ಯೆ 1663 ಕ್ಕೆ ಏರಿಕೆಯಾಗಿದೆ. ಇನ್ನೂ. ಬೆಂಗಳೂರಿನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,05,749 ಕ್ಕೆ ಏರಿಕೆಯಾಗಿದೆ. ಸದ್ಯ 34,224 ಸಕ್ರಿಯ ಪ್ರಕರಣಗಳಿದ್ದು, 69,861 ಮಂದಿ ಗುಣಮುಖರಾಗಿದ್ದಾರೆ.

- Advertisement -

Latest News

error: Content is protected !!