Tuesday, May 21, 2024
Homeತಾಜಾ ಸುದ್ದಿಚಿರು ಸರ್ಜಾ ಅಂತ್ಯಕ್ರಿಯೆ ವೇಳೆ ಕೊರೊನಾ ನಿಯಮ ಉಲ್ಲಂಘನೆ, 59 ಮಂದಿಯ ಮೇಲೆ ಕೇಸ್ ದಾಖಲು

ಚಿರು ಸರ್ಜಾ ಅಂತ್ಯಕ್ರಿಯೆ ವೇಳೆ ಕೊರೊನಾ ನಿಯಮ ಉಲ್ಲಂಘನೆ, 59 ಮಂದಿಯ ಮೇಲೆ ಕೇಸ್ ದಾಖಲು

spot_img
- Advertisement -
- Advertisement -

ಬೆಂಗಳೂರು, ಜೂ.18 (ಹಿ.ಸ) : ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ವೇಳೆಯಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ನಗರದ ನಾನಾ ಠಾಣೆಗಳಲ್ಲಿ 59 ಪ್ರಕರಣಗಳು ದಾಖಲಾಗಿವೆ.

ನಿಯಮ ಪಾಲಿಸದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರೇ ಸ್ವಯಂಪ್ರೇರಿತವಾಗಿ ಸಿಲಿಕಾನ್ ಸಿಟಿಯ ಜಯನಗರ, ತಲಘಟ್ಟಪುರ, ಜಯನಗರ, ಬನಶಂಕರಿ, ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ರೋಗದ ಹಾವಳಿ ಹೆಚ್ಚಿದ್ದಾಗಲೇ ತೀವ್ರ ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಅವರು ಜೂ.7 ರಂದು ಕೊನೆಯುಸಿರೆಳಿದಿದ್ದರು. ಅವರ ಪಾರ್ಥಿವ ಶರೀರವನ್ನು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರಿಸಲಾಗಿತ್ತು. ಆಘಾತಕೊಳ್ಳಗಾದ ಅಭಿಮಾನಿ ದಂಡು ಸೇರಿ ಸ್ಯಾಂಡಲ್ ವುಡ್ ಕಲಾವಿದರು, ರಾಜಕೀಯ ದುರೀಣರು ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಸಂಖ್ಯಾತ ಜನರು ಪಾರ್ಥಿವ ಶರೀರ ವೀಕ್ಷಿಸಿದ್ದರು. ಹೀಗಾಗಿ ರಾಜ್ಯ ಸರ್ಕಾರ ಸೂಚಿಸಿದ್ದ ಕೊರೊನಾ ನಿಯಂತ್ರಣ ನಿಯಮ‌ ಉಲ್ಲಂಘಿಸಿದ ಆರೋಪದಡಿ ನಾನಾ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ‌.

ಜೂ.8 ರಂದು ದಕ್ಷಿಣ ತಾಲೂಕು ನೆಲಗುಳಿ ಗ್ರಾಮದಲ್ಲಿರುವ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಅಂತ್ಯ ಸಂಸ್ಕಾರ ಕಾರ್ಯ ನೆರವೇರಿತ್ತು. ಕೊರೊನಾ ನಿಯಮ ಉಲ್ಲಂಘಿಸಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!