Thursday, June 4, 2026
Homeಕರಾವಳಿಮಂಗಳೂರುಕಡಬ; ಸಾಲ ತೀರಿಸಲಾಗದೇ ನೊಂದು ವ್ಯಕ್ತಿ ಆತ್ಮಹತ್ಯೆ

ಕಡಬ; ಸಾಲ ತೀರಿಸಲಾಗದೇ ನೊಂದು ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಕಡಬ; ಸಾಲ ತೀರಿಸಲಾಗದೇ ಮಾನಸಿಕವಾಗಿ ನೊಂದು ವ್ಯಕ್ತಿ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ಕೋಡಿಂಬಾಳದಲ್ಲಿ ನಡೆದಿದೆ.ಕೋಡಿಂಬಾಳದ ಅರ್ಪಾಜೆ ನಿವಾಸಿ ದಯಾನಂದ ರೈ(55) ಆತ್ಮಹತ್ಯೆಗೆ ಶರಣಾದವರು.

ದಯಾನಂದ ರೈ ಅವರ ಪತ್ನಿ ಕೆಲಸಕ್ಕೆ ಹೋಗಿ ವಾಪಾಸ್ ಮನೆಗೆ ಬಂದಾಗ ದಯಾನಂದ ರೈ ಮನೆಯಲ್ಲಿ ಎಲ್ಲೂ ಕಾಣಿಸಿಲ್ಲ.ಹುಡುಕಾಡಿದಾಗ ಮನೆಯ ಹಾಲ್ ನಲ್ಲಿರುವ ರೂಂನ ಬಾಗಿಲು ಒಳಗಿಂದ ಚಿಲಕ ಹಾಕಿ ಹಾಕಿರೋದು ಕಂಡಿದೆ, ಕಿಟಕಿಯಿಂದ ನೋಡಿದಾಗ ಅಲ್ಲಿ ಅವರು ಮರದ ಅಡ್ಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ.

ಮೃತ ದಯಾನಂದ ರೈ ಅವರು ಸಾಲ ಮಾಡಿಕೊಂಡಿದ್ದು ಅದನ್ನು ತೀರಿಸಲಾಗದೇ ಮಾನಸಿಕವಾಗಿ ನೊಂದಿದ್ದರು. ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ವಾರಿಜ ಅವರು ಕಡಬ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!