Friday, June 26, 2026
Homeಕರಾವಳಿಮಂಗಳೂರುಕೆಸರುಗದ್ದೆಯಾದ ಬಿ ಸಿ ರೋಡಿನ ಸರ್ವೀಸ್ ಬಸ್ ನಿಲ್ದಾಣ; ಕೇಳೋರಿಲ್ಲ ಪ್ರಯಾಣಿಕರ ಗೋಳು

ಕೆಸರುಗದ್ದೆಯಾದ ಬಿ ಸಿ ರೋಡಿನ ಸರ್ವೀಸ್ ಬಸ್ ನಿಲ್ದಾಣ; ಕೇಳೋರಿಲ್ಲ ಪ್ರಯಾಣಿಕರ ಗೋಳು

- Advertisement -
- Advertisement -

ಬಂಟ್ವಾಳ: ಮೂರು ನಾಲ್ಕು ದಿನಗಳಿಂದ  ಸುರಿಯುತ್ತಿರುವ ಮಳೆಯಿಂದಾಗಿ ಬಿಸಿರೋಡಿನ ಸರ್ವೀಸ್ ಬಸ್ ನಿಲ್ದಾಣ ಕೆಸರು ಗದ್ದೆಯಂತಾಗಿದ್ದು, ಪ್ರಯಾಣಿಕರ ಪಾಡು ದೇವರಿಗೆ ಪ್ರೀತಿ ಅನ್ನೋ ಹಾಗಾಗಿದೆ.

ಬಸ್ ನಿಲ್ದಾಣದ ಎದುರಿರುವ ರಸ್ತೆಯಲ್ಲಿ ಕೆಸರು ಹಾಗೂ ನೀರು ತುಂಬಿಕೊಂಡಿದ್ದ ಪ್ರಯಾಣಿಕರು ನಡೆದಾಡಲು ಪೇಚಾಡುವಂತಾಗಿದೆ.ಮಂಗಳೂರಿ ಹೋಗುವವರಿಗೆ ನಿಲ್ಲಲು ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಿದ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಸರು ತುಂಬಿಕೊಂಡಿದೆ.

ಇನ್ನು ಹಳೆಯ ತಾಲೂಕು ಕಚೇರಿಯ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ರಸ್ತೆಯ ಮಣ್ಣು ಮಳೆಯ ನೀರಿನ ಜೊತೆ ಸರ್ವೀಸ್ ರಸ್ತೆಗೆ ಬಂದು ನಿಂತಿದೆ. ಮಳೆಯ ನೀರು ಸರಿಯಾಗಿ ಹೋಗಲು ವ್ಯವಸ್ಥೆಯಿಲ್ಲದ ಸರ್ವೀಸ್ ರಸ್ತೆಯಲ್ಲಿ ಇದೀಗ ಕೆಸರಿನ ಸಮಸ್ಯೆ ಸಾರ್ವಜನಿಕರಿಗೆ ತಲೆನೋವಾಗಿದೆ.ಸಂಬಂಧಿಸಿದ ಅಧಿಕಾರಿಗಳು ಕೂಡಲೇ ರಸ್ತೆಯಲ್ಲಿ ತುಂಬಿರುವ ಕೆಸರನ್ನು ತೆಗೆಯುವ ಮೂಲಕ ಸಾರ್ವಜನಿಕ ಆಗಿರುವ ಸಮಸ್ಯೆಯನ್ನು ಪರಿಹರಿಸಲು ಮನವಿ ಮಾಡಿದ್ದಾರೆ

- Advertisement -

Latest News

error: Content is protected !!