Friday, May 3, 2024
Homeತಾಜಾ ಸುದ್ದಿಚೀನಾ ಕಂಪನಿಯೊಂದಿಗಿನ ಒಪ್ಪಂದ ರದ್ದುಗೊಳಿಸಿದ ಭಾರತೀಯ ರೈಲ್ವೆ

ಚೀನಾ ಕಂಪನಿಯೊಂದಿಗಿನ ಒಪ್ಪಂದ ರದ್ದುಗೊಳಿಸಿದ ಭಾರತೀಯ ರೈಲ್ವೆ

spot_img
- Advertisement -
- Advertisement -

ನವದೆಹಲಿ: ಭಾರತೀಯ ರೈಲ್ವೆಯಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಲಯದ ನಿಗಮವಾದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾವು (ಡಿಎಫ್‌ಸಿಸಿಐಎಲ್), ಬೀಜಿಂಗ್ ರಾಷ್ಟ್ರೀಯ ರೈಲ್ವೆ ಸಂಶೋಧನೆ ಮತ್ತು ವಿನ್ಯಾಸ ಸಂಸ್ಥೆಯ ಸಿಗ್ನಲ್ ಮತ್ತು ಸಂವಹನ ಸಮೂಹಕ್ಕೆ ನೀಡಲಾದ ಯೋಜನಾ ಒಪ್ಪಂದಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

ಯೋಜನೆಗಳ ಕಾಮಗಾರಿಯನ್ನು ನಿಧಾನಗೊಳಿಸುತ್ತಿರುವ ಹಿನ್ನಲೆಯಲ್ಲಿ ಒಪ್ಪಂದ ರದ್ದುಗೊಳಿಸಿರುವುದಾಗಿ ರೈಲ್ವೆ ಹೇಳಿದೆ.

ಭಾರತ-ಚೀನಾ ಸಂಘರ್ಷವು ಭಾರತದಲ್ಲಿ ಚೀನಾ ವಿರೋಧಿ ಭಾವನೆಗಳನ್ನು ಹುಟ್ಟುಹಾಕಿದೆ, ಪ್ರತಿಭಟನಾಕಾರರು ಮತ್ತು ಸಿಎಐಟಿಯಂತಹ ಕೆಲವು ವ್ಯಾಪಾರ ಸಂಸ್ಥೆಗಳು ಗಡಿ ಬಿಕ್ಕಟಿಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿವೆ.

ಈಗಾಗಲೇ, ಟೆಲಿಕಾಂ ಸಚಿವಾಲಯವು ಬಿಎಸ್ಎನ್ಎಲ್, ಎಂಟಿಎನ್ಎಲ್ ಮತ್ತು ಇತರ ಖಾಸಗಿ ಕಂಪನಿಗಳಿಗೆ ಚೀನಾದ ಎಲ್ಲಾ ವ್ಯವಹಾರಗಳು ಮತ್ತು ಉಪಕರಣಗಳನ್ನು ನಿಷೇಧಿಸುವಂತೆ ಆದೇಶಿಸಿದೆ. 4ಜಿ ಉನ್ನತೀಕರಣದಲ್ಲಿ ಚೀನೀ ಉಪಕರಣಗಳನ್ನು ಬಳಸದಂತೆ ಸೂಚಿಸಲಾಗಿದೆ. ಟೆಲಿಕಾಂ ಸಚಿವಾಲಯದ ನಿರ್ಧಾರವು ಅದರ ಅಂಗಸಂಸ್ಥೆಗಳ 4 ಜಿ ನವೀಕರಣ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸೇನೆಯು ಜೂನ್ 15-16ರ ರಾತ್ರಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರು ಮುಖಾಮುಖಿಯಾಗಿ ಇಪ್ಪತ್ತು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಇನ್ನೂ ನಾಲ್ಕು ಭಾರತೀಯ ಸೈನಿಕರ ಆರೋಗ್ಯ ಪರಿಸ್ಥಿತಿ ಈಗ ಸ್ಥಿರವಾಗಿದ್ದಾರೆ.

- Advertisement -
spot_img

Latest News

error: Content is protected !!