Thursday, June 4, 2026
Homeತಾಜಾ ಸುದ್ದಿನನ್ನ ತಂದೆಗೆ ಬೆಡ್ ನೀಡಿ, ಇಲ್ಲ ಇಂಜೆಕ್ಷನ್ ನೀಡಿ ಕೊಂದು ಬಿಡಿ: ಕಣ್ಣಂಚಲ್ಲಿ...

ನನ್ನ ತಂದೆಗೆ ಬೆಡ್ ನೀಡಿ, ಇಲ್ಲ ಇಂಜೆಕ್ಷನ್ ನೀಡಿ ಕೊಂದು ಬಿಡಿ: ಕಣ್ಣಂಚಲ್ಲಿ ನೀರು ತರಿಸುತ್ತೆ ಕೋವಿಡ್ ಸೋಂಕಿತ ವ್ಯಕ್ತಿಯ ಮಗನ ಈ ವಿಡಿಯೋ

- Advertisement -
- Advertisement -

ಮಹಾರಾಷ್ಟ್ರ: ಆಸ್ಪತ್ರೆಯಲ್ಲಿ ನಿಮಗೆ ಹಾಸಿಗೆಗಳನ್ನ ಒದಗಿಸಲು ಸಾಧ್ಯವಾಗದಿದ್ರೆ, ಕನಿಷ್ಠ ಇಂಜೆಕ್ಷನ್ ಕೊಟ್ಟು ಕೊಂದು ಬಿಡಿ ಎಂದು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತನ ಮಗನೊಬ್ಬ ತನ್ನ ಅಳಲು ತೋಡಿಕೊಂಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣವು ದಿನದಲ್ಲಿ ಎರಡು ಲಕ್ಷ ದಾಟಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ, ಮತ್ತೊಂದೆಡೆ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿಯಾಗಿಲ್ಲ. ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯ ಬಗ್ಗೆ ಅನೇಕ ರೀತಿಯ ಸುದ್ದಿಗಳು ಬರುತ್ತಿವೆ.

ಇನ್ನು ಮಹಾರಾಷ್ಟ್ರದ ಚಂದ್ರಪುರದ ಯುವಕನೊಬ್ಬ, ತನ್ನ ತಂದೆಯೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಬಂದಿದ್ದಾನೆ. ಆಂಬ್ಯುಲೆನ್ಸ್‌ʼನಲ್ಲಿರುವ ಆಮ್ಲಜನಕ ನಿಧಾನವಾಗಿ ಖಾಲಿಯಾಗ್ತಿದೆ. ಆದ್ರೆ, ತಂದೆಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಅವರನ್ನ ಆಂಬ್ಯುಲೆನ್ಸ್‌ʼನಲ್ಲಿಯೇ ಇರಿಸಲಾಗಿದೆ.

ಆಸ್ಪತ್ರೆಯಲ್ಲಿ ಹಾಸಿಗೆ ಸಿಗ್ತಿಲ್ಲ ಮತ್ತು ಆಮ್ಲಜನಕವು ಖಾಲಿಯಾಗುತ್ತಿದೆ. ನನ್ನ ತಂದೆಗೆ ಇಲ್ಲಿ ಹಾಸಿಗೆ ಸಿಗದಿದ್ದರೆ, ಕನಿಷ್ಠ ನನಗೆ ಇಂಜೆಕ್ಷನ್ ನೀಡಿ ಕೊಂದುಹಾಕಿ’ ಎಂದು ಹೇಳಿದ್ದಾನೆ. ನಾನು ಅವರನ್ನ ಮನೆಗೆ ಕರೆದೊಯ್ಯಲು ಸಾಧ್ಯವಿಲ್ಲ. ಯಾಕಂದ್ರೆ, ಅವ್ರಿಗೆ ಉಸಿರಾಟದ ತೊಂದರೆಯಿದ್ದು, ಆಕ್ಸಿಜನ್‌ ತೆಗೆದ್ರೆ ಅವ್ರು ಉಳಿಯೋಲ್ಲ’ ಎಂದು ಗೋಳಾಡುತ್ತಿದ್ದಾನೆ. ದೇಶದ ಅನೇಕ ರಾಜ್ಯಗಳಲ್ಲಿನ ಬಹುತೇಕ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇಲ್ಲ. ಹಾಸಿಗೆಯ ಕೊರತೆಯಿಂದ ಜನರು ಸಮಸ್ಯೆಗಳನ್ನ ಎದುರಿಸಿದ್ದಾರೆ.

- Advertisement -

Latest News

error: Content is protected !!