Wednesday, June 3, 2026
Homeಕರಾವಳಿಉಡುಪಿರಾಜ್ಯದಲ್ಲಿ 6200ರ ಗಡಿದಾಟಿದ ಕೊರೋನಾ ಸಂಖ್ಯೆ: ಇಂದು 204 ಜನರಿಗೆ ಕೊರೋನಾ, ನಾಲ್ಕು ಬಲಿ

ರಾಜ್ಯದಲ್ಲಿ 6200ರ ಗಡಿದಾಟಿದ ಕೊರೋನಾ ಸಂಖ್ಯೆ: ಇಂದು 204 ಜನರಿಗೆ ಕೊರೋನಾ, ನಾಲ್ಕು ಬಲಿ

- Advertisement -
- Advertisement -

ಮಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ.ರಾಜ್ಯದಲ್ಲಿ ಇಂದು 204 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಸ್ವಾಮೀಜಿಯೋರ್ವರಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದೆ. ಹೀಗಾಗಿ ಮಠದ ಆವರಣವನ್ನು ಸೀಲ್ ಡೌನ್ ಮಾಡಲಾಗಿದೆ.

ರಾಜ್ಯದಲ್ಲಿ ಇಂದು ಚಿಕ್ಕಮಗಳೂರು ಕಡೂರಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿ ಸೇರಿದಂತೆ 204 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ

ಯಾದಗಿರಿ 66; ಉಡುಪಿ 22; ಬೆಂಗಳೂರು ನಗರ 17; ಕಲಬುರಗಿ 16; ರಾಯಚೂರು 15; ಬೀದರ್​ 14; ಶಿವಮೊಗ್ಗ 10; ದಾವಣಗೆರೆ 9; ಕೋಲಾರ 6; ಮೈಸೂರು ಮತ್ತು ರಾಮನಗರ ತಲಾ 5; ವಿಜಯಪುರ 4; ಬಾಗಲಕೋಟೆ ಮತ್ತು ಉತ್ತರ ಕನ್ನಡ ತಲಾ 3; ದಕ್ಷಿಣ ಕನ್ನಡ, ಹಾಸನ ಮತ್ತು ಧಾರವಾಡ ತಲಾ 2; ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಪ್ಪಳ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಒಟ್ಟು 3195 ಸಕ್ರಿಯ ಪ್ರಕರಣಗಳಿದ್ದು, 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

- Advertisement -

Latest News

error: Content is protected !!