- Advertisement -
- Advertisement -
ಜಗತ್ತಿನಲ್ಲಿ ಒಟ್ಟು 190ಕ್ಕೂ ಹೆಚ್ಚಿನ ರಾಷ್ಟ್ರಗಳು ಮಹಾಮಾರಿ ಕೊರೊನಾದಿಂದ ಜರ್ಜರಿತಗೊಂಡಿದೆ. ತಾವಿರುವ ದೇಶಗಳಲ್ಲಿ ಕೊರೊನಾ ಬಂದಿದ್ದು ತಿಳಿಯುತ್ತಿದ್ದಂತೆ ಆಯಾ ದೇಶಗಳಲ್ಲಿದ್ದ ಭಾರತೀಯ ತಕ್ಷಣ ಹೊರಟು ದೇಶಕ್ಕೆ ಮರಳಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಸುಮಾರು 15 ಲಕ್ಷ ಪ್ರಯಾಣಿಕರು ವಿವಿಧ ದೇಶಗಳಿಂದ ಭಾರತಕ್ಕೆ ಮರಳಿದ್ದಾರೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ತಿಳಿಸಿದ್ದಾರೆ.
ಜನವರಿ 18 ಮತ್ತು ಮಾರ್ಚ್ 23ರ ನಡುವೆ 15 ಲಕ್ಷ ಮಂದಿ ಪ್ರಯಾಣಿಕರು ದೇಶಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಅಂತಾರಾಷ್ಟ್ರೀಯ ಪ್ರಯಾಣಿಕರ ವಿರುದ್ಧದ ಕಣ್ಗಾವಲನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.
- Advertisement -
