Friday, July 19, 2024
HomeUncategorizedದೇಶ ಲಾಕ್ ಡೌನ್ ಆದರೂ ಕಾಂಡೋಮ್ ಗೆ ಹೆಚ್ಚಾಗುತ್ತಿದೆ ಡಿಮ್ಯಾಂಡ್

ದೇಶ ಲಾಕ್ ಡೌನ್ ಆದರೂ ಕಾಂಡೋಮ್ ಗೆ ಹೆಚ್ಚಾಗುತ್ತಿದೆ ಡಿಮ್ಯಾಂಡ್

spot_img
- Advertisement -
- Advertisement -

ಕೊರೊನಾ ವೈರಸ್‌ ನ ಲಾಕ್ ಡೌನ್ ನಂತರ ದಿನಸಿ ಮಾರಾಟದ ಪ್ರಮಾಣ ಹೆಚ್ಚಾಗಿದೆ. ಇದರೊಂದಿಗೆ ಅನಗತ್ಯ ಗರ್ಭ ತಡೆಯುವ ಕಾಂಡೋಮ್ ಬೇಡಿಕೆ ಕೂಡ ಹೆಚ್ಚಾಗಿದೆ. ಲಾಕ್ ಡೌನ್ ಮತ್ತು ವರ್ಕ್ ಫ್ರಮ್ ಹೋಂ ಕಾರಣ ದಂಪತಿ ಮನೆಯಲ್ಲಿದ್ದಾರೆ. ಗೆಳೆಯ-ಗೆಳತಿಯರು ಒಟ್ಟಿಗೆ ವಾಸಿಸುತ್ತಿದ್ದಾರೆ. ಹೊರಗೆ ಎಲ್ಲಿಯೂ ಸುತ್ತಾಡಲು ಹೋಗುವಂತಿಲ್ಲ. ಸಿನಿಮಾ, ಮಾಲ್, ಪಾರ್ಕ್ ಸುತ್ತಾಟವಿಲ್ಲ. ಮನೆಯಲ್ಲಿರುವ ಕಾರಣ ಕಾಂಡೋಮ್ ಖರೀದಿಯ ಪ್ರಮಾಣ ಹೆಚ್ಚಾಗಿದೆ. ಔಷಧಿ ಅಂಗಡಿ ಹಾಗೂ ಆನ್ಲೈನ್ ನಲ್ಲಿ ಕಾಂಡೋಮ್ ಖರೀದಿಗೆ ಜನ ಮುಗಿ ಬೀಳುತ್ತಿದ್ದರೆ ಎಂದು ಅರ್ಥ ತಜ್ಞರು ಮಾಹಿತಿ ನೀಡಿದ್ದಾರೆ.

ಔಷಧಿ ಮಳಿಗೆಗಳಲ್ಲಿ ಕಾಂಡೋಮ್‌ಗಳ ಕೊರತೆ ಕಾಣ್ತಿದೆ. ಕಳೆದ ಕೆಲವು ದಿನಗಳಲ್ಲಿ ಕಾಂಡೋಮ್ ಮಾರಾಟವು ಶೇಕಡಾ 25 ರಿಂದ 50 ರಷ್ಟು ಹೆಚ್ಚಾಗಿದೆ. ಜನರು ದೊಡ್ಡ ಪ್ಯಾಕೆಟ್‌ಗಳ ಕಾಂಡೋಮ್‌ಗಳನ್ನು ಖರೀದಿಸುತ್ತಿದ್ದಾರೆಂದು ಅಂಗಡಿಯವರು ಹೇಳ್ತಿದ್ದಾರೆ. ಮೊದಲಿಗೆ ಸಣ್ಣ ಪ್ಯಾಕ್‌ಗಳ ಮಾರಾಟ ಹೆಚ್ಚಾಗಿತ್ತಂತೆ. ಲಾಕ್ ಡೌನ್ ಆದ್ಮೇಲೆ ದೊಡ್ಡ ಪ್ಯಾಕ್‌ಗಳ ಮಾರಾಟ ಹೆಚ್ಚಾಗಿದೆ.

ಕೆಲವು ವೈದ್ಯಕೀಯ ಮಳಿಗೆಗಳು ಕಾಂಡೋಮ್ ಬೆಲೆಯನ್ನು ಶೇಕಡಾ 30 ರವರೆಗೆ ಹೆಚ್ಚಿಸಿವೆ. ಲಾಕ್‌ಡೌನ್‌ ಕಾರಣ ಜನರಿಗೆ ಸಾಕಷ್ಟು ಸಮಯ ಸಿಗ್ತಿದೆ. ಈ ಲಾಕ್‌ಡೌನ್ ಹೊಸದಾಗಿ ಮದುವೆಯಾದ ದಂಪತಿಗೆ ಸುವರ್ಣಾವಕಾಶ. ಪರಸ್ಪರ ಅರ್ಥ ಮಾಡಿಕೊಳ್ಳಲು ಹಾಗೂ ದೈಹಿಕ ಸಂಬಂಧ ಬೆಳೆಸಲು ಸಾಕಷ್ಟು ಸಮಯ ಸಿಕ್ಕಿದೆ. ಸಾಂಕ್ರಾಮಿಕ ರೋಗ, ಯುದ್ಧದ ಸಂದರ್ಭದಲ್ಲಿ ಜನರು ಭಯದಲ್ಲಿರುತ್ತಾರೆ. ಇಂತ ಸಂದರ್ಭದಲ್ಲಿ ಸಂಪೂರ್ಣವಾಗಿ ಬದುಕಲು ಬಯಸುತ್ತಾರೆಂದು ಅನೇಕ ವರದಿಗಳು ಹೇಳಿವೆ.

- Advertisement -
spot_img

Latest News

error: Content is protected !!