ಕೊರೊನಾ ಫೋಮೈಟ್ ಟ್ರಾನ್ಸ್ ಮೀಡರ್ ಇರುವುದರಿಂದ ಆಭರಣದಿಂದ ದೂರವಿರಿ. ಕೊರೊನಾ ರೋಗಿ ಕೆಮ್ಮಿದಾಗ, ಸೀನಿದಾಗ ಈ ವೈರಸ್ ಆಭರಣಗಳ ಮೇಲೆ ಹೆಚ್ಚು ಹೊತ್ತು ಜೀವಂತರವಾಗಿರುತ್ತದೆ. ನಂತರ ಆಭರಣ ಮುಟ್ಟಿದವರಿಗೆ ಅಪಾಯ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾ ಲಾಕ್ ಡೌನ್ ನಿಂದ ಮನೆಯಲ್ಲೇ ಇರುವ ಕಾರಣ ಕಡಿಮೆ ಒಡವೆ, ವಸ್ತ್ರಗಳನ್ನು ಧರಿಸಿ. ಅಲ್ಲದೆ ವಾಚ್, ಬೆಲ್ಟ್ ಧರಿಸೋದನ್ನು ಕಡಿಮೆ ಮಾಡಿ. ನೀವು ಧರಿಸುವ ಬಟ್ಟೆಗಳು ಕೂಡ ಸಿಂಪಲ್ ಆಗಿರಲಿ. ಈ ಹಿಂದೆ ವೈದ್ಯರು ಯಾವತ್ತೂ ಸೂಟ್ ಅಥವಾ ಏಪ್ರನ್ ನಲ್ಲೇ ಇರುತ್ತಿದ್ದರು. ಆದರೆ ಇದೀಗ ಅವರು ಕೂಡ ಕಡಿಮೆ ಬಟ್ಟೆ ಧರಿಸುತ್ತಿದ್ದಾರೆ ಎಂದು ಬೆಂಗಳೂರಿನ ತಜ್ಞ ವೈದ್ಯ ಡಾ. ಮನೋಹರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಉಂಗುರ, ಓಲೆ, ಬಳೆ, ಸರ, ಕನ್ನಡಕ, ವಾಚ್ ಎಲ್ಲವೂ ಅಪಾಯಕಾರಿಯಾಗಿರುತ್ತವೆ. ವಿದೇಶಗಳಲ್ಲಿ ಆಭರಣಗಳನ್ನು ಹಾಕುವುದರಿಂದ ದೂರ ಉಳಿಯಲಾಗುತ್ತಿದೆ. ವೈರಸ್ ಕೊಲ್ಲಬೇಕಾ? ಹಾಗಿದ್ದಲ್ಲಿ ದಯಮಾಡಿ ಆಭರಣಗಳಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ.
ವಾಚ್, ಬೆಲ್ಟ್, ವಸ್ತ್ರಗಳಿಂದಲೂ ಕೊರೋನಾ ಬರುತ್ತದೆ !: ವೈದ್ಯರ ವರದಿ
- Advertisement -
- Advertisement -
- Advertisement -