Tuesday, May 7, 2024
Homeಕರಾವಳಿಉಡುಪಿಉಡುಪಿ: ಸಾರ್ವಜನಿಕರ ಹಣವನ್ನು ಅಂಚೆ ಪಾಲಕ ಸ್ವಂತ ಉಪಯೋಗಕ್ಕೆ ಬಳಸಿದ ಆರೋಪ; ದೂರು ದಾಖಲು

ಉಡುಪಿ: ಸಾರ್ವಜನಿಕರ ಹಣವನ್ನು ಅಂಚೆ ಪಾಲಕ ಸ್ವಂತ ಉಪಯೋಗಕ್ಕೆ ಬಳಸಿದ ಆರೋಪ; ದೂರು ದಾಖಲು

spot_img
- Advertisement -
- Advertisement -

ಉಡುಪಿ: ಸಾರ್ವಜನಿಕರ ಹಣವನ್ನು ಅಂಚೆ ಪಾಲಕ ಸ್ವಂತ ಉಪಯೋಗಕ್ಕೆ ಬಳಸಿದ ಬಗ್ಗೆ ಉಡುಪಿಯ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಉತ್ತರ ಅಂಚೆ ವಿಭಾಗದ ವ್ಯಾಪ್ತಿಗೆ ಸಂಬಂಧಿಸಿ ಅರೆಖಂಡಿಗೆ ಶಾಖಾ ಅಂಚೆ ಪಾಲಕರಾಗಿ ರಾಜೇಶ್ ಅಚಾರ್ಯ 2004ರ ಅ.4ರಿಂದ 2021ರ ಮಾ.23ರವರೆಗೆ ಕಾರ್ಯನಿರ್ವಹಿಸಿದ್ದರು.ಇವರು ಕರ್ತವ್ಯದಲ್ಲಿದ್ದಾಗ ಸಾರ್ವಜನಿಕರಾದ ಸುನೀತಾ ನಾಯಕ್, ಪೂರ್ಣಿಮಾ ಕುಲಾಲ್, ಆಶಾ ಸದಾನಂದ ರಾವ್ ಹಾಗೂ ಸುಜಾತ ಎಂಬವರಿಗೆ ಸಂಬಂಧಿಸಿ 4 ಟಿಡಿ ನಕಲಿ ಪಾಸ್ ಪುಸ್ತಕಗಳಲ್ಲಿ ಒಟ್ಟು 52,000ರೂ. ಹಣವನ್ನು ಇಲಾಖಾ ಲೆಕ್ಕಕ್ಕೆ ಜಮೆ ಮಾಡದೆ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಉಡುಪಿ ಉತ್ತರ ಅಂಚೆ ವಿಭಾಗದ ಅಂಚೆ ನಿರೀಕ್ಷಕ ಶಂಕರ ಲಮಾಣಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!