Friday, April 19, 2024
Homeಇತರದೇಶಾದಂತ್ಯ ಅಡುಗೆ ಅನಿಲ ಬೆಲೆ ಏರಿಕೆ: ಗ್ರಾಹಕರಿಗೆ ಮತ್ತೊಮ್ಮೆ ಶಾಕ್!

ದೇಶಾದಂತ್ಯ ಅಡುಗೆ ಅನಿಲ ಬೆಲೆ ಏರಿಕೆ: ಗ್ರಾಹಕರಿಗೆ ಮತ್ತೊಮ್ಮೆ ಶಾಕ್!

spot_img
- Advertisement -
- Advertisement -

ನವದೆಹಲಿ : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 15 ರೂ.ಹೆಚ್ಚಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಬದಲಾವಣೆ ಆಧರಿಸಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅದರಂತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸಲಾಗುತ್ತಿದೆ.

ಎರಡು ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇದು ಸತತ ನಾಲ್ಕನೇ ಹೆಚ್ಚಳವಾಗಿದೆ. ಜನವರಿ 1 ರಿಂದ ದೇಶೀಯ ಅಡುಗೆ ಅನಿಲ ಸಿಲಿಂಡರ್ ಬೆಲೆ 205 ರೂ. ಏರಿಕೆಯಾಗಿದೆ.

ಸಬ್ಸಿಡಿ ಇಲ್ಲದೆ 14.2 ಕೆಜಿ ಸಿಲಿಂಡರ್ ಬೆಲೆ ಈಗ ದೆಹಲಿಯಲ್ಲಿ 899.50 ರೂ.ಗೆ ಏರಿದೆ. ಕೋಲ್ಕತ್ತಾದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ರೂ.911 ರಿಂದ ರೂ.926 ಕ್ಕೆ ಏರಿಕೆಯಾಗಿದ್ದು, ಮುಂಬೈನಲ್ಲಿ ರೂ.844.50 ರಿಂದ ರೂ.899.50 ಕ್ಕೆ ಏರಿದೆ. ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಈಗ 915.50 ರೂ.ಗೆ ಏರಿದೆ. ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ 900.50 ರೂ. ಇತ್ತು.

19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ : ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಅನಿಲದ ಬೆಲೆ 1736.5 ರೂ. ಕೋಲ್ಕತ್ತಾದಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 1805.5 ರೂ. ಮುಂಬೈನಲ್ಲಿ 1685 ರೂ., ಚೆನ್ನೈನಲ್ಲಿ ಸಿಲಿಂಡರ್ ಗೆ 1867.5 ರೂ.ಇದೆ.

- Advertisement -
spot_img

Latest News

error: Content is protected !!