Saturday, April 20, 2024
Homeಕರಾವಳಿಉಳ್ಳಾಲ: ದೇವಾಲಯದಲ್ಲಿ ವಿವಾದಾತ್ಮಕ ಪೋಸ್ಟರ್

ಉಳ್ಳಾಲ: ದೇವಾಲಯದಲ್ಲಿ ವಿವಾದಾತ್ಮಕ ಪೋಸ್ಟರ್

spot_img
- Advertisement -
- Advertisement -

ಉಳ್ಳಾಲ: ನಾಳೆಯಿಂದ ಆರಂಭವಾಗಿರುವ ಉಳ್ಳಾಲದ ದೇವಾಲಯವೊಂದರ ಎರಡು ದಿನಗಳ ಜಾತ್ರೆಯಿಂದ ಹಿಂದೂಯೇತರ ವ್ಯಾಪಾರಿಗಳು ದೂರ ಇರುವಂತೆ ಪೋಸ್ಟರ್ ವೊಂದನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಳ್ಳಾಲ ಬೈಲ್ ನ ಮೈದಾನವೊಂದರಲ್ಲಿ ಹಾಕಿತ್ತು.

ಈ ನೆಲದ ದೈವ ದೇವರುಗಳನ್ನು ಪೂಜಿಸುವವರಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು ಎಂದು ಅದರಲ್ಲಿ ಬರೆಯಲಾಗಿತ್ತು. ಆದಾಗ್ಯೂ, ಈ ವಿವಾದಾತ್ಮಕ ಪೋಸ್ಟರ್ ಸಂಗತಿ ತಿಳಿದುಬಂದ ಕೂಡಲೇ ಸ್ಥಳೀಯ ಪೊಲೀಸರು ಫೋಸ್ಟರ್ ತೆರವುಗೊಳಿಸಿದ್ದಾರೆ. ವಾರ್ಷಿಕ ಜಾತ್ರೆ ನಾಳೆಯಿಂದ ಆರಂಭವಾಗಲಿದೆ.

ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಯು.ಟಿ. ಖಾದರ್, ಈ ಪೋಸ್ಟರ್ ಹಿಂದಿರುವ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವಿವಾದಾತ್ಮಕ ಪೋಸ್ಟರ್ ನಿಂದ ಅಂತರ ಕಾಪಾಡಿಕೊಳ್ಳುವಂತೆ ದೇವಾಲಯ ಸಮಿತಿಯೊಂದಿಗೆ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದರು.

ಪ್ರತಿವರ್ಷ ಉಳ್ಳಾಲ ಜಾತ್ರೆ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಜನರು ಅಂಗಡಿಗಳನ್ನು ಹಾಕುತ್ತಾರೆ. ಇದೀಗ ಕೆಲ ದುಷ್ಕರ್ಮಿಗಳು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದರು.

- Advertisement -
spot_img

Latest News

error: Content is protected !!