Friday, May 3, 2024
Homeತಾಜಾ ಸುದ್ದಿನವದೆಹಲಿ: ಕೋವಿಡ್ ಶಿಷ್ಟಾಚಾರ ಪಾಲನೆ ಇದೀಗ ರಾಷ್ಟ್ರಧರ್ಮವಾಗಿದ್ದು, ನಾವೆಲ್ಲರೂ ತಪ್ಪದೆ ಮಾರ್ಗಸೂಚಿ ಅನುಸರಿಸಬೇಬೇಕು- ರಾಷ್ಟ್ರಪತಿ

ನವದೆಹಲಿ: ಕೋವಿಡ್ ಶಿಷ್ಟಾಚಾರ ಪಾಲನೆ ಇದೀಗ ರಾಷ್ಟ್ರಧರ್ಮವಾಗಿದ್ದು, ನಾವೆಲ್ಲರೂ ತಪ್ಪದೆ ಮಾರ್ಗಸೂಚಿ ಅನುಸರಿಸಬೇಬೇಕು- ರಾಷ್ಟ್ರಪತಿ

spot_img
- Advertisement -
- Advertisement -

ನವದೆಹಲಿ: 73ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಕೋವಿಡ್ ಶಿಷ್ಟಾಚಾರ ಪಾಲನೆ ಇದೀಗ ರಾಷ್ಟ್ರಧರ್ಮವಾಗಿದ್ದು, ನಾವೆಲ್ಲರೂ ತಪ್ಪದೆ ಮಾರ್ಗಸೂಚಿ ಅನುಸರಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣತೆತ್ತ ಮಹನೀಯರ ನೆನೆಯಬೇಕಾದ ದಿನ ಇದಾಗಿದ್ದು, ಸಾವಿರಾರು ಜನರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸಂವಿಧಾನದಲ್ಲಿ ಉಲ್ಲೇಖವಾಗಿರುವ ಎಲ್ಲ ಕರ್ತವ್ಯ ಪಾಲಿಸುವುದು ನಮ್ಮ ಕರ್ತವ್ಯವಾಗಿದ್ದು, ದೇಶದಲ್ಲಿ ಸ್ವಚ್ಛತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಕೋವಿಡ್ ವಿರುದ್ಧದ ಹೋರಾಟ ಮುಂದುವರೆದಿದ್ದು, ಕಳೆದ ಎರಡು ವರ್ಷಗಳಿಂದಲೂ ನಾವು ಈ ಸೋಂಕಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆದರೆ, ನಮ್ಮಲ್ಲೇ ನಿರ್ಮಾಣಗೊಂಡಿರುವ ಲಸಿಕೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು. ನಮ್ಮ ವೈದ್ಯರು, ದಾದಿಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲಿ ಹಗಲು-ರಾತ್ರಿ ಕೆಲಸ ಮಾಡಿದ್ದು, ಅವರ ಶ್ರಮದಿಂದಲೇ ಇಂದು ಲಕ್ಷಾಂತರ ಜನರ ಪ್ರಾಣ ಉಳಿದಿದೆ ಎಂದು ತಿಳಿಸಿದರು.

ದೇಶದ ಹೆಣ್ಣುಮಕ್ಕಳು ಇದೀಗ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿದ್ದು, ಸಶಸ್ತ್ರ ಪಡೆಗಳಲ್ಲಿ ಹೆಚ್ಚಿನ ಸ್ಥಾನ ಅಲಂಕಾರ ಮಾಡ್ತಿದ್ದಾರೆ. ಇದು ದೇಶವೇ ಹೆಮ್ಮೆ ಪಡುವಂತಹ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಉಂಟಾಗುವ ಎಲ್ಲ ಸವಾಲು ಎದುರಿಸಲು ಭಾರತ ಇದೀಗ ಸರ್ವ ಸನ್ನದ್ಧವಾಗಿದ್ದು, ಎಲ್ಲ ವಿಭಾಗಗಳಲ್ಲೂ ಭಾರತದ ಪ್ರಗತಿ ಮುಂದುವರೆದಿದೆ ಎಂದು ತಿಳಿಸಿದರು.
ನಮ್ಮ ದೇಶದ ಪ್ರಜಾಪ್ರಭುತ್ವದ ವೈವಿಧ್ಯತೆ-ಚೈತನ್ಯ ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಈ ಏಕತೆ ಮತ್ತು ಒಂದು ರಾಷ್ಟ್ರ ಎಂಬ ಮನೋಭಾವವನ್ನು ಪ್ರತಿ ವರ್ಷ ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು

- Advertisement -
spot_img

Latest News

error: Content is protected !!