Monday, May 6, 2024
Homeಕರಾವಳಿಬೆಳ್ತಂಗಡಿ : ಅಂದು ಚುನಾವಣೆ ವೇಳೆ ಶಾಸಕರಿಂದ ರಸ್ತೆಗೆ ಶಿಲಾನ್ಯಾಸ; ಇಂದು ಕಂಟ್ರಾಕ್ಟರ್ ವಸಂತ ಮಜಲುರಿಂದ...

ಬೆಳ್ತಂಗಡಿ : ಅಂದು ಚುನಾವಣೆ ವೇಳೆ ಶಾಸಕರಿಂದ ರಸ್ತೆಗೆ ಶಿಲಾನ್ಯಾಸ; ಇಂದು ಕಂಟ್ರಾಕ್ಟರ್ ವಸಂತ ಮಜಲುರಿಂದ ಜಲ್ಲಿ ತೆರವು

spot_img
- Advertisement -
- Advertisement -

ಬೆಳ್ತಂಗಡಿ : ಗರ್ಡಾಡಿ, ಡೆಂಜೋಳಿ, ಬೊಲ್ಲಾಜೆ ಮೂಲಕ ಬಳೆಂಜ ಪಂಚಾಯತ್‌ಗೆ ಸಂಪರ್ಕಿಸುವ ರಸ್ತೆಯು ತೀರಾ ಹದಗೆಟ್ಟಿದ್ದು ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ದೃಷ್ಠಿಯಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಿಂತಿ ಸಂಹಿತೆ ವೇಳೆ ಜನರಿಗೆ ಟೆಂಡರ್ ಆಗದೆ ಇದ್ದರೂ ರೂ 2 ಕೋಟಿ 60 ಲಕ್ಷ ವೆಚ್ಚದ ಟೆಂಡರ್ ಆಗಿದೆ ಎಂದು ರಸ್ತೆ ಅಭಿವೃದ್ಧಿಗಾಗಿ ಶಿಲಾನ್ಯಾಸವನ್ನು ನೆರವೇರಿಸಿದ್ದರು. ಈ ವೇಳೆ ರಸ್ತೆ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರಿಂದ ಶಾಸಕರಿಗೆ ಅಭಿನಂದನೆಯ ಜೈಕಾರದ ಫ್ಲೆಕ್ಸ್ ಹಾಕಲಾಗಿತ್ತು.

ಈ ರಸ್ತೆಯ ಟೆಂಡರ್ ಆಗದೆ ಅಡ್ವಾಸ್ ವರ್ಕ್ ಅಭಿವೃದ್ಧಿಯ ಜವಾಬ್ದಾರಿಯನ್ನು ಅಭ್ಯುದಯ ಕನ್ಟ್ರಕ್ಷನ್‌ನ ಕಂಟ್ರಾಕ್ಟರ್ ಆಗಿರುವ ವಸಂತ ಮಜಲು ಅವರು ವಹಿಸಿಕೊಂಡಿದ್ದು, ರಸ್ತೆ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಜಲ್ಲಿ ಕಲ್ಲನ್ನು ಕೂಡಾ ತಂದು ರಾಶಿ ಹಾಕಿದ್ದರು.

ಆದರೆ ಆ ಬಳಿಕ ಇದುವರೆಗೂ ಯಾವುದೇ ಕಾಮಗಾರಿ ನಡೆಸದೆ, ಇದೀಗ ಮಾ.8 ರಂದು ಏಕಾಏಕಿ ಗುತ್ತಿಗೆದಾರರಾದ ವಸಂತ ಮಜಲು ಅವರು ಅಲ್ಲಿ ಹಾಕಿದ್ದ ಜಲ್ಲಿ ಕಲ್ಲಿನ ರಾಶಿಯನ್ನು ಜೆ.ಸಿ.ಬಿ. ಬಳಸಿ ಟಿಪ್ಪರ್‌ನಲ್ಲಿ ಕೊಂಡುಹೋಗಲು ಮುಂದಾಗಿದ್ದಾರೆ.

ಈ ವೇಳೆ ಸ್ಥಳೀಯರು ಅದನ್ನು ತಡೆದಿದ್ದು, ರಸ್ತೆ ಅಭಿವೃದ್ಧಿ ಮಾಡದೆ ಅದನ್ನು ಕೊಂಡು ಹೋಗಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಈ ಬಗ್ಗೆ ಶಾಸಕರು ನಮಗೆ ಏನೂ ಅಂತ ಉತ್ತರ ಕೊಡಬೇಕು ಎಂದಿದ್ದರು. ಇದೇ ಸಂದರ್ಭದಲ್ಲಿ ಪಕ್ಕದಲ್ಲಿ ಶಾಸಕರು ಕಾರ್ಯಕ್ರಮಕ್ಕೆ ಆಗಮಿಸಿದರು. ಪ್ರತಿಭಟನಾಕಾರರು ಅಲ್ಲಿಗೆ ಹೋಗಿ ಮಾಹಿತಿ ತಿಳಿಯಲು ಮುಂದಾಗಿದ್ದಾರೆ. ಈ ವಿಚಾರ ತಿಳಿದ ಶಾಸಕರು ಕಾರ್ಯಕ್ರಮದ ಮಧ್ಯದಲ್ಲಿ ಕಾರಿನಲ್ಲಿ ವಾಪಸ್ ಹೋಗಿದ್ದಾರೆ ಎಂದು ಊರವರು ತಿಳಿಸಿದ್ದಾರೆ.

ವಿಚಾರವನ್ನು ತಿಳಿದು ಮಾಧ್ಯಮದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಸ್ಥಳದಲ್ಲಿದ್ದ ಗುತ್ತಿಗೆದಾರ ವಸಂತ ಮಜಲು ಅವರಲ್ಲಿ ಜಲ್ಲಿ ಹಾಕಿದ್ದನು ತೆಗೆದುಕೊಂಡು ಹೋಗುವ ಬಗ್ಗೆ ಸ್ಪಷ್ಟನೆಯನ್ನು ಕೇಳಲು ಪ್ರಯತ್ನಿಸಿದಾಗ ಮಾಧ್ಯಮದವರಿಂದ ತಪ್ಪಿಸಿಕೊಂಡು ತನ್ನ ವಾಹನದಲ್ಲಿ ಕಾಲ್ಕಿತ್ತರು.

ಬಳೆಂಜ ಪಂಚಾಯತ್ ಸದಸ್ಯ ರವೀಂದ್ರ ಬಿ.ಎಂ. ಅವರು ಮಾತನಾಡಿ ಶಾಸಕರು ರಸ್ತೆ ಮಾಡಿಸಿದ್ದರೆ ವಿರೋಧ ಪಕ್ಷದಲ್ಲಿದ್ದರೂ ನಾನು ಬ್ಯಾನರ್ ಹಾಕುತ್ತಿದ್ದೆ, ಈಗ ಟೆಂಡರ್ ಆಗದೆ ಕೆಲಸ ಆರಂಭಿಸಿದ್ದು ತಪ್ಪು ಎಂದು ಒಪ್ಪಿಕೊಂಡು ಆ ಮೇಲೆ ಬೇಕಿದ್ದರೆ ಜಲ್ಲಿಯನ್ನು ಕೊಂಡೊಯ್ಯಲಿ ಎಂದರು. ಆದ್ರೆ ವಸಂತ ಮಜಲು ಜಲ್ಲಿಯನ್ನು ಟಿಪ್ಪರ್ ನಲ್ಲಿ ಲೋಡ್ ಮಾಡಿಸಿ ಖಾಲಿ ಮಾಡಿಸಿದ್ದಾರೆ‌.

ಶಾಸಕರ ತಪ್ಪೋ..,ಗುತ್ತಿಗೆದಾರರ ತಪ್ಪೋ.., ಅಲ್ಲ ರಾಜಕೀಯ ಮುಖಂಡರು ಇವರೆಲ್ಲರನ್ನೂ ನಂಬಿರುವುದು ಜನರದೇ ತಪ್ಪೋ ಗೊತ್ತಿಲ್ಲ. ಆದರೆ ಹೋಗಲು ಸಾಧ್ಯವಾಗದ ಈ ರಸ್ತೆಯೊಂದು ಆದಷ್ಟು ಬೇಗ ದುರಸ್ತಿಯಾದರೆ ಈ ಭಾಗದ ಜನರು ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತಾಗುವುದಂತೂ ಖಂಡಿತ.

- Advertisement -
spot_img

Latest News

error: Content is protected !!