Saturday, May 4, 2024
Homeಕ್ರೀಡೆಕ್ರಿಕೆಟ್ ನಿವೃತ್ತಿಯ ಕುರಿತು ತನ್ನ ನಿರ್ಧಾರ ಹಂಚ್ಚಿಕೊಂಡ ರೋಹಿತ್ ಶರ್ಮಾ

ಕ್ರಿಕೆಟ್ ನಿವೃತ್ತಿಯ ಕುರಿತು ತನ್ನ ನಿರ್ಧಾರ ಹಂಚ್ಚಿಕೊಂಡ ರೋಹಿತ್ ಶರ್ಮಾ

spot_img
- Advertisement -
- Advertisement -

ಹಿರಿಯ ಆಟಗಾರರಂತಹ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಅವರಂತಹ ಕ್ರಿಕೆಟ್ ಪಟುಗಳ ಅಲಭ್ಯತೆಯ ಹೊರತಾಗಿಯೂ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 41ರಿಂದ ಜಯಿಸಿದೆ. ಧರ್ಮಶಾಲಾದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತವು ಇನ್ನಿಂಗ್ಸ್ ಮತ್ತು 64 ರನ್ ಅಂತರದ ಗೆಲುವು ಕಂಡಿದೆ.

ಧರ್ಮಶಾಲಾದಲ್ಲಿ ನಡೆದ ಪಂದ್ಯಾವಳಿಯ ಸಂದರ್ಭದಲ್ಲಿ ಮಾತನಾಡಿದ ಕ್ರಿಕೆಟಿಗ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯ ತಮ್ಮ ಆಲೋಚನೆ ಬಗ್ಗೆ ಹೇಳಿದ್ದಾರೆ. ದಿನೇಶ್ ಕಾರ್ತಿಕ್ ಅವರೊಂದಿಗಿನ ಸಂವಾದಲ್ಲಿ ಭಾರತೀಯ ನಾಯಕನಿಗೆ ನಿವೃತ್ತಿಯ ಬಗ್ಗೆ ಕೇಳಲಾಯಿತು.

ಈ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ರೋಹಿತ್, “ಒಂದು ದಿನ ನಾನು ಬೆಳಿಗ್ಗೆ ಎಚ್ಚರಗೊಂಡಾಗ ನಾನು ಆಡುವಷ್ಟು ಉತ್ತಮನಿಲ್ಲ ಎಂದು ಭಾವಿಸಿದರೆ ನಿವೃತ್ತಿ ಘೋಷಿಸುತ್ತೇನೆ. ಅದರ ಬಗ್ಗೆ ಅವರಿಗೆ ತಿಳಿಸುತ್ತೇನೆ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ನನ್ನ ಕ್ರಿಕೆಟ್ ನಿಜವಾಗಿಯೂ ಮೇಲಕ್ಕೆ ಏರಿದೆ ಮತ್ತು ನಾನು ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದೇನೆ’ ಎಂದು ರೋಹಿತ್ ಹೇಳಿದರು.

ಹಾಗೆಯೇ “ಸಂಖ್ಯೆಗಳನ್ನು ನೋಡುವ ವ್ಯಕ್ತಿ ನಾನಲ್ಲ. ಹೌದು, ದೊಡ್ಡ ರನ್ ಗಳಿಸುವುದು, ಆ ಸಂಖ್ಯೆಗಳು ಮುಖ್ಯ, ಆದರೆ ಅಂತಿಮವಾಗಿ ಈ ತಂಡದಲ್ಲಿ ಕ್ರಿಕೆಟ್ ಆಡುವ ಸಂಸ್ಕೃತಿಯ ಬಗ್ಗೆ ನಾನು ಗಮನಹರಿಸಿದ್ದೇನೆ. ನಾನು ಒಂದು ನಿರ್ದಿಷ್ಟ ಬದಲಾವಣೆಯನ್ನು ತರಲು ಬಯಸುತ್ತೇನೆ. ಆಟಗಾರರು ಮೈದಾನಕ್ಕೆ ಹೋಗಿ ಸಾಕಷ್ಟು ಸ್ವಾತಂತ್ರ್ಯದಿಂದ ಆಡುತ್ತಾರೆ” ಎಂದು ಇದೇ ವೇಳೆ ರೋಹಿತ್ ಹೇಳಿದರು.

- Advertisement -
spot_img

Latest News

error: Content is protected !!