- Advertisement -
- Advertisement -
ಬಂಟ್ವಾಳ : ಕೊರೊನ ತಡೆಗಟ್ಟುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದೆಲ್ಲೆಡೆ ಮೇ.3ರ ವರೆಗೆ ಲಾಕ್ ಡೌನ್ ಮುಂದುವರೆಸಲು ತೀರ್ಮಾನಿಸಿದೆ. ಅದರಂತೆ ಹಲವು ಪ್ರದೇಶಗಳನ್ನು ಕೋರನ ಕೇಸ್ ಗುರುತಿಸಿ ನಿರ್ಬಂಧ ಹೇರಲಾಗಿದೆ.
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು, ತುಂಬೆ ಗ್ರಾಮ, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮ, ಪುತ್ತೂರು ತಾಲೂಕಿನ ಸಂಪ್ಯ, ಸುಳ್ಯ ತಾಲೂಕಿನ ಅಜ್ಜಾವರ, ಮಂಗಳೂರಿನ ತಾಲೂಕಿನ ತೊಕ್ಕೊಟ್ಟು ಪ್ರದೇಶಗಳನ್ನು ಸರ್ಕಾರದ ನಿರ್ದೇಶನದಂತೆ ಸಂಪೂರ್ಣ ನಿರ್ಬಂಧ ಮಾಡಲಾಗಿದೆ.
ಈ ಪ್ರದೇಶಗಳಿಗೆ ಸರ್ಕಾರದ ಸೂಚನೆಯಂತೆ ಇನ್ಸಿಡೆಂಟ್ ಕಮಾಂಡರ್ ಗಳ ನೇಮೀಸಲಾಗುವುದು. ಆರೋಗ್ಯ ಮತ್ತು ಇತರೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
- Advertisement -