Saturday, June 6, 2026
Homeತಾಜಾ ಸುದ್ದಿಬಿಜೆಪಿ ನಾಯಕನ ಕೊಲೆ ತನಿಖೆ ಚುರುಕಾಗುತ್ತಿದ್ದಂತೆ ಬಿಜೆಪಿ ಸೇರಲು ಕಸರತ್ತು ಮಾಡುತ್ತಿರುವ ವಿನಯ್‌ ಕುಲಕರ್ಣಿ?

ಬಿಜೆಪಿ ನಾಯಕನ ಕೊಲೆ ತನಿಖೆ ಚುರುಕಾಗುತ್ತಿದ್ದಂತೆ ಬಿಜೆಪಿ ಸೇರಲು ಕಸರತ್ತು ಮಾಡುತ್ತಿರುವ ವಿನಯ್‌ ಕುಲಕರ್ಣಿ?

- Advertisement -
- Advertisement -

ಬೆಂಗಳೂರು: ರಾಜ್ಯ ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಬಿಜೆಪಿ ಸೇರಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ತನಿಖೆ ಚುರುಕಾಗುತ್ತಿದ್ದಂತೆ ವಿನಯ್ ಕುಲಕರ್ಣಿ ಬಿಜೆಪಿ ಸೇರಲು ಶತಪ್ರಯತ್ನ ನಡೆಸುತ್ತಿದ್ದಾರೆ. ವಿನಯ್ ಕುಲಕರ್ಣಿಗೆ ಮೈಸೂರು ಭಾಗದ ಸಚಿವರೊಬ್ಬರು ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ.

ಯೋಗಿಶ್ ಗೌಡ

ಬಿಜೆಪಿಯ ಬೆಂಗಳೂರಿನ ಮುಖಂಡರೊಬ್ಬರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಕಳೆದ 3 ದಿನಗಳಿಂದ ಬೀಡು ಬಿಟ್ಟಿರುವ ವಿನಯ್‌, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್‌ ಶಾ, RSS ಪ್ರಮುಖ ಮೋಹನ್ ಭಾಗವತ್, ಸಚಿವ ಸದಾನಂದ ಗೌಡ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಲ್‌. ಸಂತೋಷ್ ಮತ್ತಿತರರ ಭೇಟಿಗೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಬೆಳ್ಳಿಗಟ್ಟಿ ಗ್ರಾಮದ ಬಳಿ ನಾಗೇಶ್ ಎಂಬವರಿಗೆ ಸೇರಿದ 40 ಎಕರೆ ಜಮೀನಿನಲ್ಲಿ, 9ಎಕರೆ ಜಮೀನನ್ನು ಯೋಗೀಶ್ ಗೌಡ ಖರೀದಿಸಿದ್ದರು. ಬಳಿಕ 15 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಜಮೀನು ಖರೀದಿ ವಿಷಯದಲ್ಲಿ ಯೋಗೀಶ್ ಗೌಡ ಹಾಗೂ ಬಸವರಾಜ್ ಮುತ್ತಗಿಗೆ ವಿವಾದ ನಡೆದಿತ್ತು. ಈ ಹಿನ್ನಲೆಯಲ್ಲಿ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರುವ ಉದಯ ಜಿಮ್ ನಲ್ಲೇ ಯೋಗೀಶ್ ಗೌಡ ಅವರನ್ನು ಐವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು.

ಈ ಕೊಲೆಗೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಮುಖಂಡ ಬಸವರಾಜ್ ಮುತ್ತಗಿ ಸೇರಿ ವಿಕ್ರಮ್ ಬಳ್ಳಾರಿ, ವಿನಾಯಕ ಕಟಗಿ, ಕೀರ್ತಿಕುಮಾರ್ ಕುರಹಟ್ಟಿ, ಸಂಧೀಪ್ ಸವದತ್ತಿ ಎಂಬುವವರನ್ನು ಬಂಧಿಸಲಾಗಿತ್ತು. ಇನ್ನು ಈ ಕೊಲೆಗೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈ ಕೊಲೆಯಲ್ಲಿ ರಾಜ್ಯದ ಪ್ರಭಾವಿ ಸಚಿವ ವಿನಯ್ ಕುಲಕರ್ಣಿ ಕೈವಾಡ ಇರುವುದನ್ನು ಸುದ್ದಿವಾಹಿನಿಯೊಂದು ಬಯಲುಗೊಳಿಸಿತ್ತು!! ಅಷ್ಟೇ ಅಲ್ಲದೇ ಕೊಲೆಯಾದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡರ ಪತ್ನಿ ಮಲ್ಲಮ್ಮ ನನ್ನ ಗಂಡನ ಹತ್ಯೆಯಲ್ಲಿ ಸಚಿವ ವಿನಯ್ ಕುಲಕರ್ಣಿ ಪಾತ್ರ ಇದೆ ಎಂದು ಹೇಳಿದ್ದವರು

- Advertisement -

Latest News

error: Content is protected !!