Wednesday, July 22, 2026
Homeತಾಜಾ ಸುದ್ದಿನನಗೆ "ಈ ಅಭ್ಯಾಸವಿಲ್ಲದ" ಹುಡುಗಿಬೇಕೆಂದ ವಕೀಲ, ವೈರಲ್ ಆಯ್ತು ವಧುವಿಗಾಗಿ ಲಾಯರ್ ನೀಡಿದ ಜಾಹೀರಾತು...

ನನಗೆ “ಈ ಅಭ್ಯಾಸವಿಲ್ಲದ” ಹುಡುಗಿಬೇಕೆಂದ ವಕೀಲ, ವೈರಲ್ ಆಯ್ತು ವಧುವಿಗಾಗಿ ಲಾಯರ್ ನೀಡಿದ ಜಾಹೀರಾತು…

- Advertisement -
- Advertisement -

ಕೋಲ್ಕತ್ತಾ : ವಧುವಿಗಾಗಿ ಹಾಗೇ ವರನಿಗಾಗಿಗಿ ಪತ್ರಿಕೆಗಳಲ್ಲಿ ಜಾಹೀರಾತು ಹಾಕೋದನ್ನು ನಾವು ನೀವು ನೋಡಿಯೇ ಇರುತ್ತೇವೆ. ವಧು ಬೇಕು ಅಂದ್ರೆ ಆಕೆಯ ವಯಸ್ಸು, ಎತ್ತರ, ವಿದ್ಯಾರ್ಹತೆ, ಜಾತಿ, ಹೀಗೆ ಒಂದಷ್ಟು ಸಾಮಾನ್ಯ ಅರ್ಹತೆಗಳನ್ನು ಜಾಹೀರಾತಿನಲ್ಲಿ ಕೊಡೋದು ವಿಶೇಷವೇನಲ್ಲ. ಆದ್ರೆ ಕೋಲ್ಕತ್ತಾದ ವಕೀಲನೊಬ್ಬ ವಧುವಿಗಾಗಿ ನೀಡಿರುವ ಜಾಹೀರಾತೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಯೆಸ್… ಹೈಕೋರ್ಟ್ ವಕೀಲರೊಬ್ಬರು ವಧುವಿಗಾಗಿ ಜಾಹೀರಾತು ನೀಡಿದ್ದಾನೆ. ಅದರಲ್ಲಿ ಆತ ಹುಡುಗಿಗೆ ಇರಬೇಕಾದ ಅರ್ಹತೆ ಏನೆಲ್ಲಾ ಎಂದು ಹೇಳುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಸಮಯ ಕಳೆಯದಂತಹ ಹುಡುಗಿ ಬೇಕು ಅಂತಾ ಹೇಳಿದ್ದಾರೆ. ವಕೀಲರು ನೀಡಿರುವ ಈ ಜಾಹೀರಾತು ಇದೀಗ ಭಾರೀ ವೈರಲ್ ಆಗಿದೆ. ಅಲ್ಲದೇ ಈ ಜಾಹೀರಾತನ್ನು ಟ್ವಿಟರ್ ನಲ್ಲಿ ಐಎಎಸ್ ಅಧಿಕಾರಿಯೊಬ್ಬರು ಶೇರ್ ಮಾಡಿದ್ದಾರೆ. ಅಲ್ಲದೇ ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದು ಇಂತಹ ವಧು ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!