Sunday, June 7, 2026
Homeತಾಜಾ ಸುದ್ದಿಮತ್ತೆ ಇಳಿಕೆ ಕಂಡ ಹಳದಿ ಲೋಹದ ಬೆಲೆ, ಚಿನ್ನ ಪ್ರಿಯರು ಫುಲ್ ಖುಷ್...

ಮತ್ತೆ ಇಳಿಕೆ ಕಂಡ ಹಳದಿ ಲೋಹದ ಬೆಲೆ, ಚಿನ್ನ ಪ್ರಿಯರು ಫುಲ್ ಖುಷ್…

- Advertisement -
- Advertisement -

ಬೆಂಗಳೂರು: ಕಳೆದ ಕೆಲವು ತಿಂಗಳಿಂದ ರಾಕೆಟ್ ವೇಗದಲ್ಲಿ ಏರುತ್ತಿದ್ದ ಚಿನ್ನದ ದರದಿಂದಾಗಿ ಆಭರಣ ಪ್ರಿಯರು ಫುಲ್ ಚಿಂತೆಯಲ್ಲಿದ್ದರು. ಇನ್ಮೇಲೆ ಚಿನ್ನ ಹೇಗಪ್ಪಾ ಖರೀದಿ ಮಾಡೋದು ಅನ್ನೋ ಯೋಚನೆಯಲ್ಲಿದ್ದರು. ಅಂತಹವರಿಗೆ ಇದೀಗ ಮತ್ತೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಸೋಮವಾರ ಚಿನ್ನದ ದರದಲ್ಲಿ ಇಳಿಮುಖವಾಗಿದೆ. ನಿನ್ನೆ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 370 ರೂಪಾಯಿ ಕಡಿಮೆಯಾಗಿದ್ದು, 47,420 ರೂಪಾಯಿ ತಲುಪಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನದ ದರ 370 ರೂಪಾಯಿ ಕಡಿಮೆಯಾಗಿ 51,730 ರೂ. ತಲುಪಿದೆ. ಕೊರೋನಾ ಮೊದಲಾದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಏರಿಕೆ, ಇಳಿಕೆ ಕಾಣುತ್ತಿದೆ.

ಕಳೆದ ವಾರ 10 ಗ್ರಾಂಗೆ 640 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಸೋಮವಾರ 370 ರೂ. ಕಡಿಮೆಯಾಗಿ ಇಳಿಕೆ ಹಾದಿಯಲ್ಲಿದೆ ಎನ್ನಲಾಗಿದೆ.

- Advertisement -

Latest News

error: Content is protected !!