Thursday, June 4, 2026
Homeತಾಜಾ ಸುದ್ದಿಮಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಜೆ. ಉಮೇಶ್ ಚಂದ್ರ ನಿಧನ

ಮಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಜೆ. ಉಮೇಶ್ ಚಂದ್ರ ನಿಧನ

- Advertisement -
- Advertisement -

ಮಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಜೆ. ಉಮೇಶ್ ಚಂದ್ರ (70ವ) ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಎಐಸಿಸಿ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಅದಲ್ಲದೆ ಅಖಿಲ ಇಂಟಕ್ ಪದಾಧಿಕಾರಿಯಾಗಿ, ಮಾಜಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO ) ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಅಂದಿನ ಕಾಲದಲ್ಲಿ ಅಖಿಲ ಭಾರತ ಯುವ ಇಂಟಕ್ ನ್ನುಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು. ನವ ಮಂಗಳೂರು ಬಂದರು ಮಂಡಳಿ ಟ್ರಸ್ಟಿ ಯಾಗಿ, ಕೆನರಾ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅದಲ್ಲದೆ ಜೆಪ್ಪಿನ ಮೊಗರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಗೌರವ ಅಧ್ಯಕ್ಷ ರಾಗಿ, ಪ್ರಸ್ತುತ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಒಬ್ಬ ಸಹೋದರ ಮತ್ತು ಓರ್ವ ಸಹೋದರಿ ಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!