Friday, May 3, 2024
Homeತಾಜಾ ಸುದ್ದಿಶೀಘ್ರವೇ ಕನ್ನಡ ಕಡ್ಡಾಯ ಬಳಕೆ ನಿಯಮ ಜಾರಿ: ಸಿಎಂ

ಶೀಘ್ರವೇ ಕನ್ನಡ ಕಡ್ಡಾಯ ಬಳಕೆ ನಿಯಮ ಜಾರಿ: ಸಿಎಂ

spot_img
- Advertisement -
- Advertisement -

ಬೆಂಗಳೂರು: ಎಲ್ಲಾ ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಆಗಿವೆ. ಈ ಮಾತನ್ನು ಪ್ರಧಾನಿ ಮೋದಿಯವರೇ ಕನ್ನಡ ನಮ್ಮ ಮಾತೃಭಾಷೆ, ಅದು ರಾಷ್ಟ್ರೀಯ ಭಾಷೆಯೂ ಹೌದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಹಾಗೇ ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ಅಧಿವೇಶನ ನಡೆಯಲಿದೆ. ಕನ್ನಡ ಬಳಕೆ ಕಡ್ಡಾಯ ನಿಯಮ ಜಾರಿಗೆ ತರುತ್ತೇವೆ ಎಂದರು.

ನಾಡಿನ ಎಲ್ಲ ಜನರಿಗೆ 67ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಮುಖ್ಯಮಂತ್ರಿ, ಕನ್ನಡ ನಾಡಿನಲ್ಲಿ ಹುಟ್ಟಲು ಏಳು ಜನ್ಮದ ಪುಣ್ಯಬೇಕು. ಕರ್ನಾಟಕ ನಿಸರ್ಗ ಸಂಪತ್ತಿನಿಂದ ಕೂಡಿರುವ ನಾಡು. ನಮ್ಮ ರಾಜ್ಯದ ಹವಾಮಾನ ಹಳ್ಳ-ಕೊಳ್ಳ, ನದಿ ನಮ್ಮ ಹೆಮ್ಮೆ. ಕರ್ನಾಟಕ ಏಕೀಕರಣದ ಹೋರಾಟವನ್ನು ನಾವ್ಯಾರೂ ಮರೆಯುವಂತಿಲ್ಲ. ಆಲೂರು ವೆಂಕಟರಾಯರು ಏಕೀಕರಣ ಹೋರಾಟದ ರೂವಾರಿ ಎಂದು ಸ್ಮರಿಸಿದರು.

- Advertisement -
spot_img

Latest News

error: Content is protected !!