Friday, August 28, 2026
Homeಕರಾವಳಿಉಡುಪಿಕುಂದಾಪುರ: ಬ್ಯಾಂಕ್‌ ಲಾಕರ್‌ನಿಂದ ಚಿನ್ನ ಹಣ ತೆಗೆದು ವಂಚನೆ: ಪತ್ನಿಯ ವಿರುದ್ಧ ಪತಿ ದೂರು ದಾಖಲು

ಕುಂದಾಪುರ: ಬ್ಯಾಂಕ್‌ ಲಾಕರ್‌ನಿಂದ ಚಿನ್ನ ಹಣ ತೆಗೆದು ವಂಚನೆ: ಪತ್ನಿಯ ವಿರುದ್ಧ ಪತಿ ದೂರು ದಾಖಲು

- Advertisement -
- Advertisement -

ಕುಂದಾಪುರ: ಬ್ಯಾಂಕ್‌ನ ಲಾಕರ್‌ನಲ್ಲಿ ಜಂಟಿ ಖಾತೆಯಲ್ಲಿ ಇಟ್ಟ ಸುಮಾರು 1 ಕೋ.ರೂ. ಮೌಲ್ಯದ ಚಿನ್ನಾಭರಣ ಹಾಗೂ 1.90 ಲಕ್ಷ ರೂ. ಹಣವನ್ನು ಪತಿಗೆ ತಿಳಿಸದೇ ತೆಗೆದಿರುವುದಾಗಿ ಪತ್ನಿಯ ವಿರುದ್ಧ ಪತಿ ದೂರು ನೀಡಿದ್ದು, ಅದರಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ. ದಯಾನಂದ ಹವಾಲ್ದಾರ್ ಅವರು ತನ್ನ ಪತ್ನಿ ಆಶಾಲತಾ ವಿರುದ್ಧ ಬ್ಯಾಂಕ್ ಲಾಕರ್‌ನಿಂದ ಹಣ, ಒಡವೆ ತೆಗೆದಿರುವುದಾಗಿ ದೂರು ನೀಡಿದ್ದಾರೆ. ತಾನು 1989ರಲ್ಲಿ ಆಶಾಲತಾ ಅವರೊಂದಿಗೆ ಮದುವೆಯಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್‌ವರೆಗೆ ನಾನು ದುಬೈ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಪತ್ನಿ ಆಶಾಲತಾ 1990ರಿಂದ 2003-04ರ ವರೆಗೆ ತನ್ನೊಂದಿಗೆ ದುಬೈಯಲ್ಲಿದ್ದು, ಬಳಿಕ ಆಶಾಲತಾ ಕುಂದಾಪುರದಲ್ಲಿ ನೆಲೆಸಿರುತ್ತಾರೆ. ಕಳೆದ ಮಾ. 3ರಂದು ಆಶಾಲತಾ ಬ್ಯಾಂಕ್‌ನ ಲಾಕರ್‌ನಲ್ಲಿದ್ದ ಎಲ್ಲ ಚಿನ್ನಾಭರಣ, ಹಣ ತೆಗೆದು, ಬೇರೆಡೆಗೆ ಸಾಗಿಸಿದ್ದು, ಇದಕ್ಕೆ ಲಕ್ಷ್ಮೀಶ ಹವಾಲ್ದಾರ್ ಹಾಗೂ ಎನ್. ನಾಗೇಶ್ ರಾವ್ ಸಹಕರಿಸಿದ್ದಾರೆಂದು ದಯಾನಂದ ಹವಾಲ್ದಾರ್ ದೂರಿನಲ್ಲಿ ತಿಳಿಸಿದ್ದಾರೆ

- Advertisement -

Latest News

error: Content is protected !!