Wednesday, June 3, 2026
Homeಕರಾವಳಿಉಡುಪಿಕಾಪು: ಯುವಕ, ಯುವತಿಯನ್ನು ತಡೆದು ವಿಚಾರಣೆ ನಡೆಸಿದ 10 ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಕಾಪು: ಯುವಕ, ಯುವತಿಯನ್ನು ತಡೆದು ವಿಚಾರಣೆ ನಡೆಸಿದ 10 ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಕಾಪು: ಜಲಪಾತ ವೀಕ್ಷಣೆಗೆ ತೆರಳಿ ವಾಪಸಾಗುತ್ತಿದ್ದ ಯುವಕ ಮತ್ತು ಯುವತಿಯನ್ನು ತಡೆದು ವಿಚಾರಣೆ ನಡೆಸಿದ ಪ್ರಕರಣದಲ್ಲಿ 10 ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 22 ರಂದು ಆಗುಂಬೆ ಸಮೀಪದ ಸಿರಿ‌ಮನೆ ಫಾಲ್ಸ್ ಗೆ ಹೋಗಿ ಬೈಕ್ ನಲ್ಲಿ ವಾಪಸಾಗುತ್ತಿದ್ದ ವೇಳೆ ಯುವಕ ಮತ್ತು ಯುವತಿಯನ್ನು ತಡೆದು ಹಿಂದೂ ಸಂಘಟನೆಯ ಕಾರ್ಯಕರ್ತರು ವಿಚಾರಣೆ ಮಾಡಿದ್ದರು

ವಿಚಾರಣೆ ವೇಳೆ ಯುವತಿ ಮನವಿ ಮಾಡಿಕೊಂಡಿದ್ದರೂ ಹಿಂದೂ ಸಂಘಟನೆಯ ಕಾರ್ಯಕರ್ತರು ವೀಡಿಯೋ ಚಿತ್ರೀಕರಿಸಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.ಬಳಿಕ ಮನೆಯವರನ್ನು ಠಾಣೆಗೆ ಕರೆಸಿದ್ದ ಆಗುಂಬೆ ಪೊಲೀಸರು, ಇಬ್ಬರ ಮನೆಯವರೂ ಪರಿಚಯಸ್ಥರೆಂದು ಪ್ರಕರಣ ದಾಖಲಿಸದೇ ವಾಪಸ್ ಕಳುಹಿಸಿದ್ದರು.‌

ಘಟನೆಯ ವೇಳೆ ಮೊಬೈಲ್ ಮೊಬೈಲ್‌ ಪೋನ್ ನಲ್ಲಿ ಚಿತ್ರೀಕರಿಸಿದ್ದ ವೀಡಿಯೋವನ್ನು ಡಿಲೀಟ್ ಮಾಡಿಸದೇ ಪೊಲೀಸರು ವಾಪಸ್ ಕಳುಹಿಸಿದ್ದು, ಒಂದು ತಿಂಗಳ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.ವೀಡಿಯೋ ವೈರಲ್ ಬೆನ್ನಲ್ಲೇ ಯುವತಿಯ ಸಹೋದರ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

Latest News

error: Content is protected !!