Sunday, June 7, 2026
Homeತಾಜಾ ಸುದ್ದಿಕುವೆಂಪು ಹಾಗೂ ನಾಡಗೀತೆಗೆ ಅವಹೇಳನದ ಆರೋಪ: ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು

ಕುವೆಂಪು ಹಾಗೂ ನಾಡಗೀತೆಗೆ ಅವಹೇಳನದ ಆರೋಪ: ರೋಹಿತ್ ಚಕ್ರತೀರ್ಥ ವಿರುದ್ಧ ದೂರು ದಾಖಲು

- Advertisement -
- Advertisement -

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನ ಮಾಡಿ ನಾಡಗೀತೆಗೆ ಅಪಮಾನ ಆರೋಪದಡಿ ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಅಕಾಶೆ ಕಾರ್ಕಳ ವಿರುದ್ದ ದೂರು ನೀಡಲಾಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ದೂರು ನೀಡಿದ್ದಾರೆ

ನಾಡು ನುಡಿಯ ಹೆಮ್ಮೆ ಕುವೆಂಪುರ ಬಗ್ಗೆ ಅವಹೇಳನ ರೀತಿಯಲ್ಲಿ ಬರೆದು ಸಾಮಾಜಿಕ ಜಾಲಾತಾಣದಲ್ಲಿ ಹಾಕಲಾಗಿದೆ ಎಂದು ದೂರಲಾಗಿದೆ. ಲಕ್ಷ್ಮಣ ಎಂಬುವರು ಕುವೆಂಪುರ ಬಗ್ಗೆ ಕೆಟ್ಟ ಪದದಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಇಬ್ಬರ ವಿರುದ್ದ ಸಮಾಜ ಸ್ವಾಸ್ಥ ಕೆಡುವ ಪ್ರಚೋದನೆ ಎಸಗಿದ್ದಾರೆ ಎಂದು ಆರೋಪಿಸಿ ಕಮಿಷನರ್ ಗೆ ದೂರು ನೀಡಲಾಗಿದೆ.

- Advertisement -

Latest News

error: Content is protected !!