Sunday, June 7, 2026
Homeತಾಜಾ ಸುದ್ದಿಚಿತ್ರರಂಗಕ್ಕೆ ಕಾಲಿಟ್ಟ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾ ಮಲೈ ; ಚಿತ್ರಕ್ಕಾಗಿ ಪಡೆದ ಸಂಭಾವನೆ...

ಚಿತ್ರರಂಗಕ್ಕೆ ಕಾಲಿಟ್ಟ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾ ಮಲೈ ; ಚಿತ್ರಕ್ಕಾಗಿ ಪಡೆದ ಸಂಭಾವನೆ 1 ರೂಪಾಯಿ

- Advertisement -
- Advertisement -

ಕರ್ನಾಟಕದ ಸಿಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾ ಮಲೈ  ರಾಜಕಾರಣದಲ್ಲಿ ಸಕ್ರೀಯರಾಗಿದ್ದು, ಸದ್ಯ ತಮಿಳು ನಾಡು ರಾಜ್ಯದ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಸದ್ದಿಲ್ಲದೆ ಸಿನಿಮಾ ರಂಗಕ್ಕೂ ಪ್ರವೇಶಿಸುತ್ತಿರುವ ಅವರು ಕನ್ನಡ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.

ಆದರೆ ಈ ಸಿನಿಮಾಕ್ಕೆ ಅವರು ತೆಗೆದುಕೊಂಡಿರುವ ಸಂಭಾವನೆ 1 ರೂಪಾಯಿ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ. ಕೆ.ಅಣ್ಣಾಮಲೈ ಬಣ್ಣ ಹಚ್ಚಿದ್ದು ‘ಅರಬ್ಬಿ’ ಎನ್ನುವ ಚಿತ್ರಕ್ಕಾಗಿ. ಈ ಸಿನಿಮಾದಲ್ಲಿ ಅವರು ಸ್ವಿಮ್ಮಿಂಗ್ ಕೋಚ್ ಪಾತ್ರದ ಮೂಲಕ ಕಾಣಿಸಿಕೊಂಡಿದ್ದು, ಈಗಾಗಲೇ ಇವರ ಭಾಗದ ಶೂಟಿಂಗ್ ಕೂಡ ಮುಗಿದಿದೆ. 

ಇದೊಂದು ಹೊಸ ಬಗೆಯ ಸಿನಿಮಾ ಆಗಿದ್ದು,  ಅಂತಾರಾಷ್ಟ್ರೀಯ ಮಟ್ಟದ ಈಜು ಕ್ರೀಡೆಯಲ್ಲಿ ಎರಡು ಕೈಗಳಿಲ್ಲದೆ ಸಾಧನೆ ಮಾಡಿರುವ ಕೆ.ಎಸ್. ವಿಶ್ವಾಸ್ ಅವರ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ.  

- Advertisement -

Latest News

error: Content is protected !!