Monday, April 29, 2024
Homeಕರಾವಳಿಸಾಂಸ್ಕೃತಿಕ ಕಲೆ ಯಕ್ಷಗಾನದ ಜ್ಞಾಪಕಾರ್ಥ ಅಂಚೆ ಚೀಟಿ ಬಿಡುಗಡೆ ಸಮಾರಂಭ; ಯಕ್ಷಧ್ರುವ ಪಟ್ಲ ಸತೀಶ್ ಸಾರಥ್ಯದಲ್ಲಿ...

ಸಾಂಸ್ಕೃತಿಕ ಕಲೆ ಯಕ್ಷಗಾನದ ಜ್ಞಾಪಕಾರ್ಥ ಅಂಚೆ ಚೀಟಿ ಬಿಡುಗಡೆ ಸಮಾರಂಭ; ಯಕ್ಷಧ್ರುವ ಪಟ್ಲ ಸತೀಶ್ ಸಾರಥ್ಯದಲ್ಲಿ ‘ಲೋಕಾಭಿರಾಮ’ ಯಕ್ಷಗಾನ

spot_img
- Advertisement -
- Advertisement -

ಮಂಗಳೂರಿನ ಅಂಚೆ ಇಲಾಖೆ ಹಾಗೂ ಎಂ.ಆರ್.ಪಿ.ಎಲ್ ಅವರ ಆಶ್ರಯದಲ್ಲಿ ಸಾಂಸ್ಕೃತಿಕ ಕಲೆ ಯಕ್ಷಗಾನದ ಜ್ಞಾಪಕಾರ್ಥ ಅಂಚೆ ಚೀಟಿ ಬಿಡುಗಡೆ ಸಮಾರಂಭವು 2024 ಫೆ. 25 ಭಾನುವಾರದಂದು ಪೂರ್ವಾಹ್ನ 10.00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಜರುಗಲಿದೆ.

ಕಾರ್ಯಕ್ರಮದ ಪ್ರಯುಕ್ತ ಯಕ್ಷದೃವ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ಪ್ರಸಿದ್ಧ ತೆಂಕುತಿಟ್ಟು ಕಲಾವಿದರಿಂದ ದಿವಂಗತ ಬೊಟ್ಟಿಕೆರೆ ಪುರುಶೋತ್ತಮ ಪೂಂಜ ವಿರಚಿತ “ಲೋಕಭಿರಾಮ” ಯಕ್ಷಗಾನ ಪ್ರಸಂಗ ಪ್ರದರ್ಶನ ನೀಡಲಿದ್ದಾರೆ.

ಯಕ್ಷಗಾನ ಕಲಾಭಿಮಾನಿಗಳಾದ ತಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಮಾನ್ಯ ಸಂಸದರು ಅಪೇಕ್ಷಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದಾರೆ. ಅಂಚೆ ಚೀಟಿಯನ್ನು ಕರ್ನಾಟಕ ಸರ್ಕಲ್ ನ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಐಪಿಒಎಸ್ ಎಸ್. ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರ್, ಹಿರಿಯ ವಿದ್ವಾಂಸ ಮತ್ತು ಕಲಾವಿದ ಎಮ್. ಪ್ರಭಾಕರ ಜೋಶಿ, ಐಪಿಒಎಸ್ ಎಲ್.ಕೆ. ದಾಸ್, ಎಂ.ಆರ್.ಪಿ.ಎಲ್ ನ ಕಾರ್ಯನಿರ್ವಾಹಕ ನಿರ್ದೇಶಕ ಮುಡ್ಕೂರ್ ಶ್ಯಾಮಪ್ರಸಾದ್ ಕಾಮತ್ ಉಪಸ್ಥಿತರಿರಲಿದ್ದಾರೆ.

- Advertisement -
spot_img

Latest News

error: Content is protected !!