Tuesday, April 30, 2024
Homeಕರಾವಳಿರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ನವ ಮಂಗಳೂರು ಬಂದರು ಪ್ರಾಧಿಕಾರದ ಎರಡು ಯೋಜನೆಗಳ ಉದ್ಘಾಟನೆ

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ನವ ಮಂಗಳೂರು ಬಂದರು ಪ್ರಾಧಿಕಾರದ ಎರಡು ಯೋಜನೆಗಳ ಉದ್ಘಾಟನೆ

spot_img
- Advertisement -
- Advertisement -

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದ ವತಿಯಿಂದ 50 ವರ್ಷಗಳ ಆಚರಣೆಯ ಅಂಗವಾಗಿ ಅವರು 6.25 ಕೋಟಿ ವೆಚ್ಚದ ಎರಡು ಯೋಜನೆಗಳನ್ನು ಶುಕ್ರವಾರಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಉದ್ಘಾಟಿಸಿದರು.

ಸ್ವರ್ಣ ಮಹೋತ್ಸವದ ಎಒಬಿ ಸರ್ಕಲ್ ರಸ್ತೆ ಮತ್ತು ಸ್ವರ್ಣ ಮಹೋತ್ಸವ ಟ್ರಕ್ ಪಾರ್ಕಿಂಗ್ ಟರ್ಮಿನಲ್ ಉದ್ಘಾಟಿಸಿದ ರಾಜ್ಯಪಾಲರು, ‘ನವ ಮಂಗಳೂರು ಬಂದರು ದೇಶದ ಇತರ ಬಂದರುಗಳಿಗೆ ಮಾದರಿಯಾಗಿದೆ. 74 ಎಂಟಿಪಿಎ ಸಾಮರ್ಥ್ಯ ಹೊಂದಿರುವ ನವ ಮಂಗಳೂರು ಬಂದರು 2018-19ರಲ್ಲಿ 42.5 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಸರಕುಗಳನ್ನು ನಿರ್ವಹಿಸಿದೆ. ಕೋವಿಡ್ ಸಮಯದಲ್ಲಿ ಎದುರಾಗಿದ್ದ ಸಮಸ್ಯೆಗಳನ್ನು ಮೀರಿ, 2023-24ನೇ ಸಾಲಿನಲ್ಲಿ 45 ಎಂಎಂಟಿ ಸರಕುಗಳನ್ನು ನಿರ್ವಹಿಸಿ, ಈವರೆಗಿನ ದಾಖಲೆ ಹಿಂದಿಕ್ಕಿದೆ’ ಎಂದರು.

ಎನ್‌ಎಂಪಿಎ ಅಧ್ಯಕ್ಷ ಎ.ವಿ. ರಮಣ, ಉಪಾಧ್ಯಕ್ಷ ಕೆ.ಜಿ.ನಾಥ್ ಇದ್ದರು.

- Advertisement -
spot_img

Latest News

error: Content is protected !!