Monday, June 8, 2026
Homeತಾಜಾ ಸುದ್ದಿಪುತ್ತೂರಿನ ಮಾಧವ ಪ್ರಭುಗೆ ಕಲರ್ಸ್‌ ಕನ್ನಡಿಗ ಪ್ರಶಸ್ತಿ ಪ್ರದಾನ

ಪುತ್ತೂರಿನ ಮಾಧವ ಪ್ರಭುಗೆ ಕಲರ್ಸ್‌ ಕನ್ನಡಿಗ ಪ್ರಶಸ್ತಿ ಪ್ರದಾನ

- Advertisement -
- Advertisement -

ಪುತ್ತೂರು: ದಿವಂಗತ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ 1 ವರ್ಷ ಕಳೆಯುತ್ತಾ ಬಂತು. ಅವರ ನೆನಪಿನಲ್ಲಿ ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್‍ನಲ್ಲಿ ಕಲರ್ಸ್ ಕನ್ನಡಿಗ ಪ್ರಶಸ್ತಿ ಘೋಷಣೆ ನೀಡಲಾಯ್ತು. ಸ್ವಯಂ ಸೇವೆಯ ಚಕ್ರವರ್ತಿ ಅಪ್ಪು, ಮತ್ತಷ್ಟು ಜನರಿಗೆ ಸ್ಫೂರ್ತಿಯಾಗಲೆಂದು ಈ ಪ್ರಶಸ್ತಿಯನ್ನು ನೀಡಲಾಯ್ತು. ಅಂತೆಯೇ ಪುತ್ತೂರಿನ ಮಾಧವ ಪ್ರಭು ಅವರಿಗೆ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದ್ರು.

ಪುತ್ತೂರಿನ ಕೂರ್ನಡ್ಕದಲ್ಲಿರುವ ಪ್ರಭು ಜನರಲ್‌ ಸ್ಟೋರ್‌ನ ಮಾಲೀಕ ಮಾಧವ ಪ್ರಭು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ. ಇವರು ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ನೀಡುವ ಮೂಲಕ ಶಿಕ್ಷಣ ಕ್ರಾಂತಿ ಮಾಡಿದ್ದು, ಇವರ ಸೇವೆಗೆ ಕಲರ್ಸ್‌ ಕನ್ನಡಿಗ ಪ್ರಶಸ್ತಿಯ ಜೊತೆಗೆ ಒಂದು ಲಕ್ಷದ ನಗದು ಕೂಡಾ ನೀಡಲಾಯ್ತು.

- Advertisement -

Latest News

error: Content is protected !!