Saturday, May 18, 2024
Homeತಾಜಾ ಸುದ್ದಿಸಾಲು ಸಾಲು ರಜೆಗಳ ಹಿನ್ನೆಲೆ; ಕುಕ್ಕೆ ಸುಬ್ರಮಣ್ಯಕ್ಕೆ ದಾಖಲೆ ಪ್ರಮಾಣದಲ್ಲಿ ಆಗಮಿಸಿದ ಭಕ್ತರು

ಸಾಲು ಸಾಲು ರಜೆಗಳ ಹಿನ್ನೆಲೆ; ಕುಕ್ಕೆ ಸುಬ್ರಮಣ್ಯಕ್ಕೆ ದಾಖಲೆ ಪ್ರಮಾಣದಲ್ಲಿ ಆಗಮಿಸಿದ ಭಕ್ತರು

spot_img
- Advertisement -
- Advertisement -

ಕಡಬ; ಸಾಲು ಸಾಲು ರಜೆಗಳ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದಾಖಲೆ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬಂದಿದೆ.  ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಕೃತಾರ್ಥರಾದರು.

ಶುಕ್ರವಾರ ಹಾಗೂ ಶನಿವಾರ ಕೂಡ ಕ್ಷೇತ್ರದಲ್ಲಿ  ಭಾರಿ ಜನಸಂಖ್ಯೆ ಕಂಡು ಬಂದಿತ್ತು. ಅಂದು  ಶ್ರೀ ಕ್ಷೇತ್ರದಲ್ಲಿ 142 ತುಲಾಭಾರ ಸೇವೆ ನೆರವೇರಿದೆ. 142 ಮಂದಿ ತುಲಾಭಾರ ಸೇವೆ ನೆರವೇರಿಸುವುದರ ಮೂಲಕ ಶ್ರೀ ದೇವರಿಗೆ ತಾವು ತೂಗಿದ ದವಸ ಧಾನ್ಯಗಳನ್ನು ನೆರವೇರಿಸಿದರು. ಇದರೊಂದಿಗೆ 1350 ಆಶ್ಲೇಷ ಬಲಿ, ನಾಗಪ್ರತಿಷ್ಠೆ-445, ಶೇಷ ಸೇವೆ-205, 300ಕ್ಕೂ ಅಧಿಕ ಕಾರ್ತಿಕ ಪೂಜೆ, ಉಳಿದಂತೆ ಮಹಾಪೂಜೆ, ಮಹಾಭಿಷೇಕ ಮತ್ತಿತರ ಸೇವೆಗಳು ಅಧಿಕವಾಗಿ ನೆರವೇರಿದೆ.

30 ಸಾವಿರಕ್ಕೂ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು. ಜಾತ್ರೆಯನ್ನು ಹೊರತು ಪಡಿಸಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರಾಗಮಿಸಿದ ದಿನವಾಗಿ ಕಂಡು ಬಂತು. ಅಲ್ಲದೆ ಕ್ಷೇತ್ರದಲ್ಲಿ ಜಾತ್ರೆಯ ವಾತಾವರಣವೇ ತುಂಬಿತು. ದಾಖಲೆ ಪ್ರಮಾಣದಲ್ಲಿ ಜನರು ನೆರೆದಿದ್ದರೂ ಶ್ರೀ ದೇವಳದ ವತಿಯಿಂದ ವ್ಯವಸ್ಥಿತವಾಗಿ ಪ್ರಸಾದವನ್ನು ಹಾಗೂ ಭೋಜನವನ್ನು ವಿತರಿಸಲಾಯಿತು.

ವಾರದಿಂದ ದಸರಾ ರಜೆಯಿದ್ದು, ಹಬ್ಬ ಮುಗಿದ ನಂತರ ಎರಡನೇ ಶನಿವಾರದ ರಜೆ ಸೇರಿದಂತೆ ನಿರಂತರ ರಜಾ ಸರಣಿ ಬಂದುದರಿಂದ ಕ್ಷೇತ್ರದತ್ತ ಭಕ್ತರ ಆಗಮನ ಅಧಿಕವಿತ್ತು. ರವಿವಾರ ಭಕ್ತರ ಆಗಮನ ಗಣನೀಯವಾಗಿ ಏರಿಕೆಯಾಗಿತ್ತು. ಇದರಿಂದಾಗಿ ಶ್ರೀ ದೇವಳದ ವಸತಿ ಗೃಹಗಳು ತುಂಬಿತ್ತು. ಇದರೊಂದಿಗೆ ಇಲ್ಲಿರುವ ಖಾಸಗಿ ವಸತಿ ಗೃಹಗಳು ಕೂಡಾ ಭರ್ತಿಯಾಗಿತ್ತು. ಅಧಿಕ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭಕ್ತರು ಶನಿವಾರ ಸಂಜೆ ವೇಳೆ ಆಗಮಿಸಿದ್ದರಿಂದ ವಸತಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

- Advertisement -
spot_img

Latest News

error: Content is protected !!