Thursday, June 4, 2026
Homeತಾಜಾ ಸುದ್ದಿಕಾರ್ಯಕ್ರಮ ನಿರೂಪಕಿ ಮೇಲೆ ಗರಂ ಆದ ಸಿಎಂ: ನೀನು ಸುಮ್ಮನ್ನಿದ್ದರೆ ಆರೋಗ್ಯಕ್ಕೆ ಒಳ್ಳೆಯದು ಎಂದ ಬಸವರಾಜ್...

ಕಾರ್ಯಕ್ರಮ ನಿರೂಪಕಿ ಮೇಲೆ ಗರಂ ಆದ ಸಿಎಂ: ನೀನು ಸುಮ್ಮನ್ನಿದ್ದರೆ ಆರೋಗ್ಯಕ್ಕೆ ಒಳ್ಳೆಯದು ಎಂದ ಬಸವರಾಜ್ ಬೊಮ್ಮಾಯಿ

- Advertisement -
- Advertisement -

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಾರ್ಯಕ್ರಮದ ನಿರೂಪಕಿ ಮೇಲೆ ಗರಂ ಆದ ಘಟನೆ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ನಡೆದ ಅಮೃತ ಭಾರತಿಗೆ ಕುರುನಾಡ ಜಾತ್ರೆ ಕಾರ್ಯಕ್ರಮವನ್ನು ಕಂಠೀರವ ಸ್ಟೇಡಿಯಂ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿರೂಪಕಿ ಪ್ರತಿಭಾ ಅವರು ಎಲ್ಲರೂ ಚಪ್ಪಾಳೆ ತಟ್ಟಿ ಕಾರ್ಯಕ್ರಮವನ್ನು ಹುರಿದುಂಬಿಸಬೇಕು ಎಂದಿದ್ದಾರೆ. ಚಪ್ಪಾಳೆ ತಟ್ಟುವುದು ಆರೋಗ್ಯಕ್ಕೆ ಉತ್ತಮ. ಇದರಿಂದ ಬಿಪಿ, ಹಾರ್ಟ್ ಆಟ್ಯಾಕ್ ಆಗಲ್ಲ ಎಂದಿದ್ದಾರೆ.

ಇಷ್ಟಾಗುತ್ತಿದ್ದಂತೆ ಸಿಎಂ ನೀವು ಈಗ ಸುಮ್ಮನಿದ್ದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಗರಂ ಆಗಿದ್ದಾರೆ. ಆಗ ನಿರೂಪಕಿ ನಕ್ಕು ಸುಮ್ಮನಾಗಿದ್ದಾರೆ.ಈ ವಿಡಿಯೋ ಸಖತ್ ವೈರಲ್ ಆಗಿದೆ.

- Advertisement -

Latest News

error: Content is protected !!