Wednesday, July 15, 2026
Homeಕರಾವಳಿಸುಳ್ಯ; ಬಟ್ಟೆ ಮಾರಿಕೊಂಡು ಬಂದ ಹಿಂದಿ ಯುವಕನಿಂದ ಯುವತಿಯೊಂದಿಗೆ ಅನುಚಿತ ವರ್ತನೆ: ಸ್ಥಳೀಯರಿಂದ ಬಿದ್ದು ಧರ್ಮದೇಟು

ಸುಳ್ಯ; ಬಟ್ಟೆ ಮಾರಿಕೊಂಡು ಬಂದ ಹಿಂದಿ ಯುವಕನಿಂದ ಯುವತಿಯೊಂದಿಗೆ ಅನುಚಿತ ವರ್ತನೆ: ಸ್ಥಳೀಯರಿಂದ ಬಿದ್ದು ಧರ್ಮದೇಟು

- Advertisement -
- Advertisement -

ಸುಳ್ಯ: ಬಟ್ಟೆ ಮಾರಿಕೊಂಡು ಬಂದ ಹಿಂದಿ ಯುವಕನೊಬ್ಬ ಮನೆಯಲ್ಲಿ ಒಬ್ಬಳೇ ಇದ್ದ ಯುವತಿಯೊಂದಿಗೆ  ಅನುಚಿತವಾಗಿ ವರ್ತಿಸಿ ಸ್ಥಳೀಯರಿಂದ ಧರ್ಮದೇಟು ತಿಂದ ಘಟನೆ  ಅಮರಪಡ್ನೂರಿನ ಜೋಗಿಯಡ್ಕ ಎಂಬಲ್ಲಿ ನಡೆದಿದೆ.

ಹಿಂದಿ ಭಾಷೆಯಲ್ಲಿ ಮಾತನಾಡುವ ಯುವಕರ ತಂಡ ಬಟ್ಟೆಗಳನ್ನು ಬೈಕಿನಲ್ಲಿರಿಸಿಕೊಂಡು ಮನೆ ಮನೆಗೆ ಬಂದು ವ್ಯಾಪಾರ ಮಾಡುತ್ತಿದ್ದರು.ಯುವಕನೊಬ್ಬ ಜೋಗಿಯಡ್ಕ ಪರಿಸರದಲ್ಲಿ ಇರುವ ಮನೆಗೆ ಬಂದು ಬಟ್ಟೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಮನೆಯಲ್ಲಿ ಯುವತಿ ಓರ್ವಳೇ ಇರುವುದನ್ನು ಗಮನಿಸಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಯುವತಿ ಬಳಿಕ ಮನೆಯವರಿಗೆ ತಿಳಿಸಿದ್ದು, ಅದೇ ಯುವಕರ ತಂಡ ಮತ್ತೊಮ್ಮೆ ಚೊಕ್ಕಾಡಿ ರಸ್ತೆಯಲ್ಲಿ ಬಂದಾಗ ಸ್ಥಳೀಯ ಯುವಕರು ಸೇರಿ ಅವರಲ್ಲಿ ವಿಚಾರಿಸಿ ಮೂರು ಮಂದಿಗೂ ಥಳಿಸಿದ್ದು, ಯುವಕರು ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!