- Advertisement -
![]()
- Advertisement -
ಕಡಬ; ಎಡಮಂಗಲ – ಕಡಬ ರಸ್ತೆಯ ಪಾಲೋಳಿ ಸೇತುವೆ ಬಳಿ ರಸ್ತೆ ನಿರ್ಜನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಸುರಿದು ಸುತ್ತಮುತ್ತಲಿನ ವಾತಾವರಣವೇ ಹದಗೆಟ್ಟು ಹೋಗಿತ್ತು. ಇದನ್ನು ಸ್ನೇಹ ಸಂಜೀವಿನಿ ಒಕ್ಕೂಟ ಎಡಮಂಗಲ ಹಾಗೂ ಎಡಮಂಗಲ ಗ್ರಾಮ ಪಂಚಾಯತ್ ಸಿಬ್ಬಂದಿಯಿಂದ ಸ್ವಚ್ಛಗೊಳಿಸಿದರು.

ಇನ್ನು ಸಾರ್ವಜನಿಕರು ಎಲ್ಲೆಂದರಲ್ಲಿ ಈ ರೀತಿ ಕಸ ಸುರಿಯುತ್ತಿರೋದರಿಂದ ದುವಾರ್ಸನೆಯಿಂದ ಅಲ್ಲಿ ಓಡಾಡೋದು ಕಷ್ಟವಾಗುತ್ತಿದೆ. ಹಾಗಾದಿ ಇಂತಹವರ ವಿರುದ್ಧ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.
- Advertisement -


