- Advertisement -
![]()
- Advertisement -
ಬಂಟ್ವಾಳ; ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆಬ್ರವರಿ ತಿಂಗಳ ತಾ.5ನೇ ಗುರುವಾರ ರಾತ್ರಿ ಭಂಡಾರಯೇರಿ, ಮರುದಿನ ತಾ.6ನೇ ಶುಕ್ರವಾರ ಬೆಳಿಗ್ಗೆ ಗಂಟೆ 10ರಿಂದ ಜರಗಲಿರುವುದು. ಆ ಪ್ರಯುಕ್ತ ಗೊನೆಮುಹೂರ್ತವು ಗ್ರಾಮದ ತಂತ್ರಿಗಳಾದ ಪಳನೀರು ಅನಂತ ಭಟ್ಟರವರ ಪೌರೋಹಿತ್ಯದಲ್ಲಿ ನಡೆಯಿತು.
ಜಾತ್ರೆಯ ಪ್ರಯುಕ್ತ ತಾ.3ನೇ, ಮಂಗಳವಾರ ಬೆಳಿಗ್ಗೆ ಗಂಟೆ 9-30ರಿಂದ ಚಪ್ಪರ ಮುಹೂರ್ತ, ಹಾಳೆಗೆ ಹೋಗುವುದು, ಬಳಿಕ ಮೂರು ದಿವಸಗಳ ಚೆಂಡು ಇತ್ಯಾದಿ ಕಾರ್ಯಕ್ರಮಗಳು ಜರಗಲಿರುವುದು.
ಗೊನೆಮುಹೂರ್ತದ ಸಂದರ್ಭದಲ್ಲಿ ಸಚಿನ್ ರೈ ಮಾಣಿಗುತ್ತು, ನರೇಂದ್ರ ರೈ ನೆಲ್ತೊಟ್ಟು, ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ, ಜಗನ್ನಾಥ ಚೌಟ ಬದಿಗುಡ್ಡೆ, ನಾರಾಯಣ ಆಳ್ವ ಕೊಡಾಜೆ, ಬಾಲಕೃಷ್ಣ ಆಳ್ವ ಕೊಡಾಜೆ, ರಾಮಚಂದ್ರ ಪೂಜಾರಿ ಪಾದೆ, ಲೋಕೇಶ್ ಬಂಗೇರ ಪಲ್ಲತ್ತಿಲ ಮತ್ತಿತರರು ಉಪಸ್ಥಿತರಿದ್ದರು.
- Advertisement -


