Friday, April 26, 2024
Homeಉತ್ತರ ಕನ್ನಡಲಾಕ್ ಡೌನ್ ನಿಂದಾಗಿ ಮಾರಾಟವಾಗದ ಚಾಕಲೇಟ್ ಗಳು : ಶಿರಸಿಯಲ್ಲಿ ಅವಧಿ ಮೀರಿದ ಚಾಕಲೇಟ್...

ಲಾಕ್ ಡೌನ್ ನಿಂದಾಗಿ ಮಾರಾಟವಾಗದ ಚಾಕಲೇಟ್ ಗಳು : ಶಿರಸಿಯಲ್ಲಿ ಅವಧಿ ಮೀರಿದ ಚಾಕಲೇಟ್ ಗಳನ್ನು ರಸ್ತೆಯಲ್ಲೇ ಎಸೆದ ಡೀಲರ್

spot_img
- Advertisement -
- Advertisement -

ಕಾರವಾರ: ಅವಧಿ ಮೀರಿದ ಕ್ವಿಂಟಾಲ್ ಗಟ್ಟಲೆ ಚಾಕಲೇಟ್ ನ್ನು ಡೀಲರ್ ಒಬ್ಬರು ರಸ್ತೆಯಲ್ಲೇ ಎಸೆದು ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹುಡ್ಲಮನೆ ಎಂಬಲ್ಲಿ ನಡೆದಿದೆ.

ಕ್ಯಾಂಡಿ ಕಂಪನಿಗೆ ಸೇರಿದ ವಿವಿಧ ಫ್ಲೇವರ್ ನ  ಚಾಕ್ಲೆಟ್ ಇದಾಗಿದ್ದು ಲಾಕ್ ಡೌನ್ ನಿಂದ ಈ ಕಂಪನಿಯ ಚಾಕ್ಲೇಟ್ ಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿಲ್ಲ. ಈ ಕಾರಣದಿಂದ ಇದರ ಅವಧಿ ಮುಗಿದಿದ್ದು, ಕಂಪನಿಯ ಡೀಲರ್ ನಗರಸಭೆಯ ಕಸ ವಿಲೇವಾರಿಗೆ ನೀಡದೆ ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದಾರೆ.


ಹೀಗೆ ಎಸೆದ ಚಾಕ್ಲೆಟ್ ಗಳನ್ನು ದನಗಳು ತಿಂದಿವೆ. ಅಲ್ಲದೆ ಮಕ್ಕಳು ಕೂಡ ಎತ್ತಿಕೊಂಡು ಹೋಗಿದ್ದಾರೆ. ರಾಶಿಗಟ್ಟಲೆ ಈ ಚಾಕ್ಲೆಟ್ ಗಳು ರಸ್ತೆ ಪಕ್ಕದಲ್ಲಿ ಬಿದ್ದಿದ್ದು ಪಕ್ಕದಲ್ಲೇ ಕೆರೆ ಸಹ ಇರುವುದರಿಂದ ಮಳೆಯಲ್ಲಿ ಈ ನೀರಿಗೆ ಸೇರಿ ಮಲೀನವಾಗಲಿದೆ. ಹೀಗಾಗಿ ಸ್ಥಳೀಯ ಜನರು ಈ ಚಾಕ್ಲೇಟ್ ಕಂಪನಿ ಡೀಲರ್ ವಿರುದ್ಧ ನಗರಸಭೆಗೆ ದೂರು ನೀಡಿದ್ದಾರೆ

- Advertisement -
spot_img

Latest News

error: Content is protected !!